ಇಂಗ್ಲೆಂಡ್ ಗೆ ಆರಂಭಿಕ ಆಘಾತ ನೀಡಿದ ಬುಮ್ರಾ- ಶಮಿ ಜೋಡಿ
Update: 2023-10-29 19:38 IST
PHOTO : cricketworlcup.com
ಲಕ್ನೋ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 39 ರನ್ ಗೆ 4 ವಿಕೆಟ್ ಕಳೆದುಕೊಂಡಿದೆ.
ಜಸ್ಪ್ರೀತ್ ಬುಮ್ರಾ ಹಾಗೂ ಮುಹಮ್ಮದ್ ಶಮಿ ಆರಂಭಿಕ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಪರ ಡೇವಿಡ್ ಮಲನ್ (16) ಜೊ ರೂಟ್ (0) ರನ್ ಗೆ ಬುಮ್ರಾ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರೆ ಜಾನಿ ಬೈರ್ ಸ್ಟೋವ್ (14) ಬೆನ್ ಸ್ಟೊಕ್ಸ್ (0) ಗೆ ಶಮಿ ಗೆ ವಿಕೆಟ್ ನೀಡಿದರು.
ಭಾರತದ ಪರ ಸತತ ಎರಡು ಓವರ್ ಮೇಡನ್ ಮಾಡಿದ ಶಮಿ, ಬುಮ್ರಾ ಜೋಡಿ ಇಂಗ್ಲೆಂಡ್ ಬ್ಯಾಟರ್ ಗಳ ಮೇಲೆ ಒತ್ತಡ ಹೇರಿದ್ದಾರೆ. ಈಗ ಇಂಗ್ಲೆಂಡ್ 11.2 ಓವರ್ ಗೆ 42 ರನ್ ಗಳಿಸಿದೆ.