×
Ad

“ಅದ್ಬುತ ಆಟಗಾರ, ಕ್ರಿಕೆಟ್‌ ದಂತಕಥೆಗಳಲ್ಲಿ ಒಬ್ಬರು”: ಮುಹಮ್ಮದ್‌ ಶಮಿಯನ್ನು ಶ್ಲಾಘಿಸಿದ ಜಸ್ಪ್ರೀತ್‌ ಬುಮ್ರಾ

Update: 2023-10-31 19:22 IST

Photo: PTI

ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಭಾರತೀಯ ವೇಗಿ ಮುಹಮ್ಮದ್‌ ಶಮಿ ಮಿಂಚಿನ ಪ್ರದರ್ಶನದ ಬಗ್ಗೆ ಸಹ ಆಟಗಾರ ಜಸ್ಪ್ರೀತ್‌ ಬುಮ್ರಾ ಸಂತಸ ವ್ಯಕ್ತ ಪಡಿಸಿದ್ದಾರೆ.

ಹಾರ್ದಿಕ್‌ ಪಾಂಡ್ಯ ಗಾಯದ ಬಳಿಕ ಶಾರ್ದೂಲ್‌ ಠಾಕೂರ್‌ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡ ಮುಹಮ್ಮದ್‌ ಶಮಿ ನ್ಯೂಝಿಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ 5 ವಿಕಟ್‌ ಗೊಂಚಲು ಪಡೆಯುವ ಮೂಲಕ ವಿಶ್ವಕಪ್‌ ನಲ್ಲಿ ಎರಡು ಬಾರಿ 5 ಐದು ವಿಕೆಟ್‌ ಪಡೆದ ಸಾಧನೆ ಮಾಡಿದರು. ಬಳಿಕ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತ ಅಲ್ಪ ರನ್‌ ಗಳಿಸಿದ್ದರೂ ಅಮೋಘ ಪ್ರದರ್ಶನ ನೀಡಿದ ಶಮಿ 4 ವಿಕೆಟ್‌ ಕಬಳಿಸಿ ಭಾರತ ಗೆಲ್ಲುವಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು.

ಈ ಬಗ್ಗೆ ಮಾತನಾಡಿದ ಭಾರತದ ತಾರಾ ಬೌಲರ್ ಜಸ್ಪ್ರೀತ್‌ ಬುಮ್ರಾ, “ನಾನು ತಿಳಿದಿರುವಂತೆ ಶಮಿ ಅದ್ಬುತ ಆಟಗಾರ, ಕ್ರಿಕೆಟ್‌ ದಂತಕಥೆಗಳಲ್ಲಿ ಒಬ್ಬರು ಮತ್ತು ಅವರು ಯಾವಾಗಲೂ ಶಾಂತವಾಗಿರುತ್ತಾರೆ. ಅವರು ಪಂದ್ಯದಲ್ಲಿ ಅಬ್ಬರಿಸಲು ಪ್ರಯತ್ನಿಸುವುದಿಲ್ಲ ಬದಲಾಗಿ ತಂಡಕ್ಕೆ ಕೊಡುಗೆ ನೀಡುತ್ತಾರೆ” ಎಂದು ಮುಹಮ್ಮದ್‌ ಶಮಿ ಬೌಲಿಂಗ್‌ ಬಗ್ಗೆ ಮಚ್ಚುಗೆಯ ಮಾತು ಆಡಿದರು.

"ನಾವು ಸಾಕಷ್ಟು ಟೆಸ್ಟ್ ಪಂದ್ಯಗಳನ್ನು ಆಡಿದ್ದೇವೆ. ನಾನು ಅವರೊಂದಿಗೆ ಬೌಲಿಂಗ್ ಮಾಡುವುದನ್ನು ನಿಜವಾಗಿಯೂ ಆನಂದಿಸುತ್ತೇನೆ. ಅವರ ಈಗಿನ ಪ್ರದರ್ಶನ ನನಗೆ ನಿಜವಾಗಿಯೂ ಸಂತೋಷ ಉಂಟುಮಾಡಿದೆ" ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News