×
Ad

ಶಾಂಘೈ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿ : ಫ್ರಾನ್ಸ್‌ನ ಆರ್ತರ್ ರಿಂಡರ್‌ನೆಕ್ ಸೆಮಿಫೈನಲ್‌ಗೆ

Update: 2025-10-10 21:40 IST

ಆರ್ತರ್ ರಿಂಡರ್‌ನೆಕ್ | Photo Credit : X \ @josemorgado

ಶಾಂಘೈ, ಅ. 10: ಫ್ರಾನ್ಸ್‌ನ ಆರ್ತರ್ ರಿಂಡರ್‌ನೆಕ್ ಶುಕ್ರವಾರ ಶಾಂಘೈ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್ ತಲುಪಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಕೆನಡದ ಫೆಲಿಕ್ಸ್ ಆಗರ್-ಅಲೈಯಸಿಮ್‌ರನ್ನು 6-3, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ.

ಈ ಪಂದ್ಯಾವಳಿಯ ಆರಂಭದಲ್ಲಿ 54ನೇ ರ್ಯಾಂಕಿಂಗ್ ಹೊಂದಿದ್ದ ರಿಂಡರ್‌ನೆಕ್ ಶಾಂಘೈಯಲ್ಲಿ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದ್ದಾರೆ. ಅವರು ಮೂರನೇ ವಿಶ್ವ ರ್ಯಾಂಕಿಂಗ್‌ನ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಸೋಲಿಸಿದ್ದಾರೆ.

‘‘ಕೆಲವು ಸಲ ಎಷ್ಟೇ ಕೆಟ್ಟದಾಗಿಯಾದರೂ ನಾವು ಗೆಲ್ಲಲು ಬಯಸುತ್ತೇವೆ. ಆದರೆ, ಇಂದಿನದು ಸಾಕಷ್ಟು ಉತ್ತಮವಾಗಿ ಕಾಣುವ ಗೆಲುವಾಗಿತ್ತು ಎಂದು ನನಗೆ ಅನಿಸುತ್ತದೆ’’ ಎಂದು ಬಳಿಕ ಹಾಸ್ಯಭರಿತವಾಗಿ ಮಾತನಾಡಿದರು.

‘‘ಇಂದಿನ ಸನ್ನಿವೇಶಗಳು ಉತ್ತಮವಾಗಿದ್ದವು. ಕೆಲವು ಕುಟುಂಬ ಸದಸ್ಯರು ಗ್ಯಾಲರಿಯಲ್ಲಿದ್ದರು’’ ಎಂದು ಅವರು ನುಡಿದರು.

13ನೇ ರ್ಯಾಂಕಿಂಗ್‌ನ ಅಲೈಯಸಿಮ್‌ರನ್ನು ಸೋಲಿಸಲು ರಿಂಡರ್‌ನೆಕ್ ಹೆಚ್ಚೇನೂ ಶ್ರಮಪಡಲಿಲ್ಲ. ಆರನೇ ಗೇಮ್‌ನಲ್ಲಿ ಡೌನ್-ದ-ಲೈನ್ ವಿನ್ನರ್ ಮೂಲಕ ಅವರು ಬ್ರೇಕ್‌ಪಾಯಿಂಟ್ ಗಳಿಸಿದರು.

ಎರಡನೇ ಸೆಟ್‌ನಲ್ಲಿ ಮೊದಲ ಗೇಮ್‌ನಲ್ಲೇ ಬ್ರೇಕ್‌ಪಾಯಿಂಟ್ ಪಡೆದರು ಮತ್ತು ಎದುರಾಳಿ ಚೇತರಿಸದಂತೆ ನೋಡಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News