×
Ad

ಅಂತರರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ತಾನೆದುರಿಸಿದ ಕಠಿಣ ಬೌಲರ್ ಹೆಸರು ಬಹಿರಂಗಪಡಿಸಿದ ಶಿಖರ್ ಧವನ್

Update: 2025-07-10 21:23 IST

ಶಿಖರ್ ಧವನ್ | PTI 

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಹಾಗೂ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ನಾನು ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಎದುರಿಸಿದ ಕಠಿಣ ಬೌಲರ್‌ಗಳಾಗಿದ್ದಾರೆ ಎಂದು ಕಳೆದ ವರ್ಷದ ಆಗಸ್ಟ್‌ ನಲ್ಲಿ ನಿವೃತ್ತಿಯಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಬಹಿರಂಗಪಡಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಗುರುವಾರ ನೀಡಿದ ಸಂದರ್ಶನದ ವೇಳೆ ಕ್ರಿಕೆಟ್‌ ನಲ್ಲಿ ತಾನು ಎದುರಿಸಿದ ಕೀಟಲೆಗಳ ಬಗ್ಗೆಯೂ ಅಭಿಪ್ರಾಯಗಳನ್ನು ಹಂಚಿಕೊಂಡರು.

ಡೇಲ್ ಸ್ಟೇಯ್ನ್ ಅವರ ಆಕ್ರಮಣಕಾರಿ ಬೌಲಿಂಗ್ ಶೈಲಿಯಿಂದ ಎದುರಿಸಿದ ಸವಾಲುಗಳ ಕುರಿತು ಧವನ್ ವಿಶೇಷವಾಗಿ ಮಾತನಾಡಿದರು.

‘‘ಡೇಲ್ ಸ್ಟೇಯ್ನ್ ಯಾವಾಗಲೂ ಕಠಿಣ ಆಟಗಾರನಾಗಿದ್ದರು. ಅವರಲ್ಲಿ ವೇಗ, ಆಕ್ರಮಣಶೀಲತೆ, ಕೌಶಲ್ಯ ಹಾಗೂ ಉಗ್ರ ನೋಟವಿತ್ತು’’ ಎಂದು ಐಎಎನ್‌ಎಸ್‌ಗೆ ಧವನ್ ತಿಳಿಸಿದರು.

ಜೇಮ್ಸ್ ಆ್ಯಂಡರ್ಸನ್ ಇನ್ನೋರ್ವ ಬಲಿಷ್ಠ್ಠ ಎದುರಾಳಿಯಾಗಿದ್ದರು ಎಂದು ಒಪ್ಪಿಕೊಂಡ ಹಿರಿಯ ಕ್ರಿಕೆಟಿಗ, ಇಂಗ್ಲಿಷ್ ವೇಗಿಯು ಬ್ಯಾಟರ್‌ಗಳಿಗೆ ಸವಾಲು ಹಾಕುವ ವಿಶಿಷ್ಟ ವಿಧಾನವನ್ನು ಉಲ್ಲೇಖಿಸಿದರು.

ಕ್ರಿಕೆಟ್‌ ನಲಿ ಸ್ಲೆಡ್ಜಿಂಗ್(ಕೀಟಲೆ)ಬಗ್ಗೆ ಧವನ್ ತನ್ನ ದೃಷ್ಟಿಕೋನವನ್ನು ಹಂಚಿಕೊಂಡಿದ್ದು, ಅದನ್ನು ಆಟದ ಅವಿಭಾಜ್ಯ ಅಂಗವೆಂದು ಪರಿಗಣಿಸಬೇಕು, ಕೆಲವೊಮ್ಮೆ ಸ್ಲೆಡ್ಜಿಂಗ್ ಆಟಗಾರರ ಪ್ರದರ್ಶನ ಮಟ್ಟವನ್ನು ಹೆಚ್ಚಿಸುತ್ತದೆ ಎಂದರು.

10 ವರ್ಷಕ್ಕೂ ಅಧಿಕ ಸಮಯ ಅಂತರರಾಷ್ಟ್ರೀಯ ಕ್ರಿಕೆಟನ್ನು ಆಡಿದ್ದ ಧವನ್, ಎಲ್ಲ ಮಾದರಿಯ ಕ್ರಿಕೆಟ್‌ ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಭಾರತದ ಪರವಾಗಿ 34 ಟೆಸ್ಟ್ ಪಂದ್ಯಗಳಲ್ಲಿ 2,315 ರನ್, 167 ಏಕದಿನ ಪಂದ್ಯಗಳಲ್ಲಿ 6,793 ರನ್ ಹಾಗೂ 68 ಟಿ-20 ಪಂದ್ಯಗಳಲ್ಲಿ 1,579 ರನ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News