×
Ad

ಆಸ್ಟ್ರೇಲಿಯ ‘ಎ’ ವಿರುದ್ಧ 2ನೇ ಅನಧಿಕೃತ ಟೆಸ್ಟ್ ಪಂದ್ಯ: ಶ್ರೇಯಸ್ ಅಯ್ಯರ್ ಅಲಭ್ಯ

Update: 2025-09-23 11:32 IST

 ಶ್ರೇಯಸ್ ಅಯ್ಯರ್ | PTI

ಮುಂಬೈ, ಸೆ.22: ಭಾರತ ಕ್ರಿಕೆಟ್ ತಂಡದ ಮಧ್ಯಮ ಸರದಿಯ ಬ್ಯಾಟರ್ ಶ್ರೇಯಸ್ ಅಯ್ಯರ್ ಲಕ್ನೊದಲ್ಲಿ ನಿಗದಿಯಾಗಿದ್ದ ಆಸ್ಟ್ರೇಲಿಯ ‘ಎ’ ತಂಡದ ವಿರುದ್ಧದ 2 ಚರ್ತುದಿನ ಪಂದ್ಯಗಳ ಸರಣಿಗೆ ನಾಯಕನಾಗಿ ನೇಮಕಗೊಂಡಿದ್ದರು. ಅಯ್ಯರ್ ಅವರು ಮಂಗಳವಾರ ಆರಂಭವಾಗಲಿರುವ ಪ್ರವಾಸಿ ತಂಡದ ವಿರುದ್ಧದ 2ನೇ ಅನಧಿಕೃತ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಬದಲಿ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.

ಅಕ್ಟೋಬರ್ 2ರಿಂದ ಅಹ್ಮದಾಬಾದ್‌ ನಲ್ಲಿ ಆರಂಭವಾಗಲಿರುವ ವೆಸ್ಟ್‌ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡದ ಮಧ್ಯಮ ಸರದಿಯಲ್ಲಿ ಸ್ಥಾನ ಪಡೆಯುವ ರೇಸ್‌ ನಲ್ಲಿ ಅಯ್ಯರ್ ಅವರಿದ್ದಾರೆ.

ಅಯ್ಯರ್ ಅನುಪಸ್ಥಿತಿಯಲ್ಲಿ ವಿಕೆಟ್‌ಕೀಪರ್-ಬ್ಯಾಟರ್ ಧ್ರುವ ಜುರೆಲ್ ಭಾರತ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ. ಅಯ್ಯರ್ ನಾಯಕನಾಗಿದ್ದಾಗ ಜುರೆಲ್ ಉಪ ನಾಯಕನಾಗಿದ್ದರು.

ಹೌದು, ಶ್ರೇಯಸ್ ವಿರಾಮ ಪಡೆದಿದ್ದು, ಮುಂಬೈಗೆ ವಾಪಸಾಗಿದ್ದಾರೆ. ಆಸ್ಟ್ರೇಲಿಯ ಎ’ ವಿರುದ್ಧ 2ನೇ ಚತುರ್ದಿನ ಪಂದ್ಯದಲ್ಲಿ ಆಡಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ಆಯ್ಕೆಗಾರರಿಗೆ ಮಾಹಿತಿ ನೀಡಿದ್ದಾರೆ. ವೆಸ್ಟ್‌ಇಂಡೀಸ್ ವಿರುದ್ಧ ಸರಣಿಗಾಗಿ ತಂಡವನ್ನು ಪ್ರಕಟಿಸಲು ಆಯ್ಕೆದಾರರು ನಡೆಸುವ ಸಭೆಯಲ್ಲಿ ಶ್ರೇಯಸ್ ಹೆಸರು ಪರಿಗಣಿಸಬಹುದು ಎಂದು ಮೂಲಗಳು ತಿಳಿಸಿವೆ.

ಗರಿಷ್ಠ ಮೊತ್ತದ ಸರಣಿಯ ಮೊದಲ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದ್ದು, ಈ ಪಂದ್ಯದಲ್ಲಿ ಅಯ್ಯರ್ 13 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಆಫ್ ಸ್ಪಿನ್ನರ್ ಕೋರಿ ರೊಚಿಸಿಯೊಲಿಗೆ ವಿಕೆಟ್ ಒಪ್ಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News