ಸಿಂಕ್‌ಫೀಲ್ಡ್ ಕಪ್ | ಸೆವಿಯನ್ ವಿರುದ್ಧ ಪ್ರಜ್ಞಾನಂದ ಡ್ರಾ

Update: 2026-08-11 22:03 IST

 ಪ್ರಜ್ಞಾನಂದ ಡ್ರಾ | Photo Credit : PTI

ಸೇಂಟ್ ಲೂಯಿಸ್ (ಅಮೆರಿಕ), ಆ. 11: ಅಮೆರಿಕದ ಸೇಂಟ್ ಲೂಯಿಸ್‌ನಲ್ಲಿ ನಡೆಯುತ್ತಿರುವ ಸಿಂಕ್‌ಫೀಲ್ಡ್ ಕಪ್ 2026 ಚೆಸ್ ಪಂದ್ಯಾವಳಿಯಲ್ಲಿ, ಭಾರತದ ಆರ್. ಪ್ರಜ್ಞಾನಂದ ಸೋಮವಾರ ನಡೆದ ತನ್ನ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ.

ಅಮೆರಿಕದ ಗ್ರಾಂಡ್‌ಮಾಸ್ಟರ್ ಸ್ಯಾಮ್ ಸೆವಿಯನ್ ವಿರುದ್ಧ ಡ್ರಾ ಸಾಧಿಸುವ ಮೂಲಕ ಅವರು ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಸೋಮವಾರ ಅವರ ಜನ್ಮದಿನವಾಗಿದ್ದು, ಕಪ್ಪು ಕಾಯಿಗಳೊಂದಿಗೆ ಆಡಿದ 21 ವರ್ಷದ ಪ್ರಜ್ಞಾನಂದ, ಸ್ಥಿರ ಪ್ರದರ್ಶನದೊಂದಿಗೆ ಆರಂಭಿಸಿದರೂ, 48 ನಡೆಗಳ ನಂತರ ಕ್ವೀನ್ಸ್ ವಿನಿಮಯದ ಬಳಿಕ ಅರ್ಧ ಅಂಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪಂದ್ಯದ ಮೊದಲನೇ ದಿನದಂದು, ಗೆಲುವು ಸಾಧಿಸಿದ ಏಕೈಕ ಆಟಗಾರ ಅಮೆರಿಕದ ಗ್ರಾಂಡ್‌ಮಾಸ್ಟರ್ ಫ್ಯಾಬಿಯಾನೊ ಕರುವಾನಾ ಆದರು. ಅವರು ಜೋರ್ಡನ್ ವಾನ್ ಫೊರೀಸ್ಟ್‌ರನ್ನು ಸೋಲಿಸಿದರು.

ಜವೋಖಿರ್ ಸಿಂಡರೊವ್ ಮತ್ತು ಲೇವನ್ ಅರೋನಿಯನ್, ವಿನ್ಸೆಂಟ್ ಕೀಮರ್ ಮತ್ತು ವೆಸ್ಲಿ ಸೋ, ಹಾಗೂ ಅನಿಶ್ ಗಿರಿ ಮತ್ತು ಮ್ಯಾಕ್ಸಿಮ್ ವಚಿಯರ್-ಲಗ್ರೇವ್ ನಡುವಿನ ಪಂದ್ಯಗಳೂ ಡ್ರಾದಲ್ಲಿ ಕೊನೆಗೊಂಡವು.

ಪ್ರಸ್ತುತ ಅಂಕಪಟ್ಟಿಯ ಪ್ರಕಾರ, ಕರುವಾನಾ 25.0 ಅಂಕಗಳೊಂದಿಗೆ ಗ್ರಾಂಡ್ ಚೆಸ್ ಟೂರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದ 24.5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ಸೋ (23.5) ಮತ್ತು ಜರ್ಮನಿಯ ಕೇಮರ್ (21.0) ಜಿಸಿಟಿ ಫೈನಲ್ಸ್‌ಗೆ ಅರ್ಹತೆ ಪಡೆಯುವ ಹಂತದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News