×
Ad

ಸ್ಕಿ ಅಪಘಾತ: 70 ಮೀಟರ್ ಮೇಲಿನಿಂದ ಬಿದ್ದು ಜರ್ಮನ್ ಫುಟ್ಬಾಲ್ ಆಟಗಾರ ಮೃತ್ಯು

Update: 2025-12-24 21:40 IST

 ಸೆಬಾಸ್ಟಿಯನ್ ಹರ್ಟನರ್ | Photo Credit ; X \ @blazers_on_fire 

ಬರ್ಲಿನ್, ಡಿ. 24: ಜರ್ಮನ್ ಫುಟ್ಬಾಲ್ ಆಟಗಾರ ಸೆಬಾಸ್ಟಿಯನ್ ಹರ್ಟನರ್ ರವಿವಾರ ಸಂಭವಿಸಿದ ಸ್ಕಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು.

ಮೋಂಟನೆಗ್ರೊದಲ್ಲಿರುವ ಸಾವನ್ ಕಕ್ ಎಂಬಲ್ಲಿ ಸ್ಕೀಯಿಂಗ್ನಲ್ಲಿ ಪಾಲ್ಗೊಂಡಿದ್ದಾಗ, ಹರ್ಟನರ್ ಸುಮಾರು 70 ಮೀಟರ್ ಎತ್ತರದಿಂದ ಬಿದ್ದು ಸಾವನ್ನಪ್ಪಿದರು ಎಂದು ಜರ್ಮನ್ ಪತ್ರಿಕೆ ‘ಬಿಲ್ಡ್’ ವರದಿ ಮಾಡಿದೆ.

ವಿಎಫ್ಬಿ ಸ್ಟಟ್ ಗರ್ಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಅವರು ತನ್ನ 16 ವರ್ಷಗಳ ಕ್ರೀಡಾ ಜೀವನದಲ್ಲಿ ಜರ್ಮನ್ ಫುಟ್ಬಾಲ್ನ ದ್ವಿತೀಯ ಮತ್ತು ತೃತೀಯ ಡಿವಿಶನ್ ಗಳಲ್ಲಿ ಹಲವು ಕ್ಲಬ್ಗಳ ಪರವಾಗಿ ಆಡಿದ್ದರು. ಇತ್ತೀಚೆಗೆ ಅವರು ಉಬರ್ಲಿಗ ಪಂದ್ಯಾವಳಿಯಲ್ಲಿ ಇಟಿಎಸ್ವಿ ಹ್ಯಾಂಬರ್ಗ್ ತಂಡದ ನಾಯಕತ್ವ ವಹಿಸಿದ್ದರು.

ಅವರು ಜರ್ಮನಿಯ ಅಂಡರ್-18 ತಂಡದ ಪರವಾಗಿ 14 ಪಂದ್ಯಗಳಲ್ಲಿ ಮತ್ತು ಅಂಡರ್-19 ತಂಡದಲ್ಲಿ ಐದು ಬಾರಿ ಆಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News