×
Ad

ಏಕದಿನ ರ‍್ಯಾಂಕಿಂಗ್: ದ್ವಿತೀಯ ಸ್ಥಾನಕ್ಕೇರಿದ ಸ್ಮತಿ ಮಂಧಾನ

Update: 2025-01-21 21:07 IST

 ಸ್ಮತಿ ಮಂಧಾನ | PC : PTI 

ಹೊಸದಿಲ್ಲಿ: ಭಾರತದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಮಂಗಳವಾರ ಬಿಡುಗಡೆಯಾಗಿರುವ ಐಸಿಸಿ ಮಹಿಳೆಯರ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಐರ್‌ಲ್ಯಾಂಡ್ ತಂಡದ ವಿರುದ್ಧ ಇತ್ತೀಚೆಗೆ ಅಮೋಘ ಪ್ರದರ್ಶನ ನೀಡಿದ ನಂತರ ಈ ಸಾಧನೆ ಮಾಡಿದ್ದಾರೆ.

3ನೇ ಏಕದಿನದಲ್ಲಿ 135 ರನ್, ಮೊದಲೆರಡು ಪಂದ್ಯಗಳಲ್ಲಿ 41 ಹಾಗೂ 73 ರನ್ ಗಳಿಸಿದ್ದ ಮಂಧಾನ ಅಗ್ರ-10ರಲ್ಲಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.

28ರ ಹರೆಯದ ಮಂಧಾನ ಇದೀಗ 738 ರ‍್ಯಾಂಕಿಂಗ್ ಪಾಯಿಂಟ್ಸ್ ಪಡೆದಿದ್ದು, ಲೌರಾ ವಾಲ್ವಾರ್ಟ್ 773 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಆಲ್‌ರೌಂಡರ್‌ಗಳ ರ‍್ಯಾಂಕಿಂಗ್‌ನಲ್ಲಿ ದೀಪ್ತಿ ಶರ್ಮಾ 6ನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News