ಆಸ್ಟ್ರೇಲಿಯ ವಿರುದ್ಧ 2ನೇ ಏಕದಿನ ಪಂದ್ಯ : ವೇಗವಾಗಿ ಶತಕ ಗಳಿಸಿದ ಭಾರತದ ಎರಡನೇ ಬ್ಯಾಟರ್ ಎನಿಸಿಕೊಂಡ ಸ್ಮತಿ ಮಂಧಾನ
Update: 2025-09-17 21:22 IST
ಸ್ಮತಿ ಮಂಧಾನ | PC : PTI
ಚಂಡಿಗಡ, ಸೆ.17: ಎಡಗೈ ಆಟಗಾರ್ತಿ ಸ್ಮತಿ ಮಂಧಾನ ಆಸ್ಟ್ರೇಲಿಯ ತಂಡದ ವಿರುದ್ಧ ಬುಧವಾರ ನಡೆದ 2ನೇ ಏಕದಿನ ಪಂದ್ಯದ ವೇಳೆ 77 ಎಸೆತಗಳಲ್ಲಿ ಶತಕ ಪೂರೈಸಿದರು. ಇದರೊಂದಿಗೆ ವೇಗವಾಗಿ ಶತಕ ಗಳಿಸಿದ ಭಾರತದ 2ನೇ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು.
ಭಾರತದ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವೇಗವಾಗಿ ಶತಕ ಗಳಿಸಿದ ದಾಖಲೆ ಮಂಧಾನ ಹೆಸರಲ್ಲೆ ಇದೆ. ಮಂಧಾನ ಐರ್‌ಲ್ಯಾಂಡ್ ವಿರುದ್ಧ 70 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಹರ್ಮನ್‌ಪ್ರೀತ್ ಕೌರ್ ಮೂರನೇ ವೇಗದ ಶತಕ(82 ಎಸೆತಗಳು)ದಾಖಲಿಸಿದ್ದಾರೆ.
ಮಂಧಾನ ಅವರು ಆಸ್ಟ್ರೇಲಿಯ ವಿರುದ್ಧ ವೇಗದ ಶತಕ ದಾಖಲಿಸಿದ ಆಟಗಾರ್ತಿಯಾಗಿದ್ದಾರೆ. ಈ ಮೂಲಕ ಇಂಗ್ಲೆಂಡ್‌ನ ನ್ಯಾಟ್ ಸಿಯೆರ್(79 ಎಸೆತ)ದಾಖಲೆಯನ್ನು ಮುರಿದಿದ್ದಾರೆ.
2ನೇ ಏಕದಿನ ಪಂದ್ಯದಲ್ಲಿ ಮಂಧಾನ ಅಂತಿಮವಾಗಿ 91 ಎಸೆತಗಳಲ್ಲಿ 117 ರನ್ ಗಳಿಸಿ ತಹಲಿಯಾ ಮೆಕ್‌ಗ್ರಾತ್‌ಗೆ ವಿಕೆಟ್ ಒಪ್ಪಿಸಿದರು.