×
Ad

5,000 ಏಕದಿನ ರನ್ಗಳನ್ನು ಪೂರೈಸಿದ ಸ್ಮೃತಿ ಮಂಧಾನ

Update: 2025-10-12 22:18 IST

Photo Credit: K.R. Deepak / thehindu

ವಿಶಾಖಪಟ್ಟಣಂ, ಅ. 12: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ರವಿವಾರ ಏಕದಿನ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 5,000 ರನ್ಗಳನ್ನು ಪೂರೈಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅವರು ಈ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.

ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಎಡಗೈ ಬ್ಯಾಟರ್ ಸ್ಮೃತಿ ಅರ್ಧ ಶತಕವನ್ನು ಸಿಡಿಸಿದರು. ಅವರು 66 ಎಸೆತಗಳಲ್ಲಿ 80 ರನ್ಗಳನ್ನು ಬಾರಿಸಿದರು. ಇದು ಈ ಪಂದ್ಯಾವಳಿಯಲ್ಲಿ ಅವರ ಮೊದಲ ಅರ್ಧ ಶತಕವಾಗಿದೆ. ಕಿಮ್ ಗಾರ್ತ್ ಎಸೆತವನ್ನು ಲಾಂಗ್ ಆಫ್ ಕಡೆಗೆ ಸಿಕ್ಸರ್ ಆಗಿ ಪರಿವರ್ತಿಸಿದ ಸ್ಮತಿ 5,000 ರನ್ಗಳನ್ನು ಪೂರೈಸಿದರು.

ಅವರು ತನ್ನ 5,000 ಏಕದಿನ ರನ್ಗಳನ್ನು 112 ಇನಿಂಗ್ಸ್ಗಳು ಮತ್ತು 5,569 ಎಸೆತಗಳಲ್ಲಿ ಪೂರೈಸಿದ್ದಾರೆ. ಅವರು ಈ ಸಾಧನೆಯನ್ನು ಮಾಡಿದ ಎರಡನೇ ಭಾರತೀಯ ಮಹಿಳೆಯೂ ಆದರು. ಇದಕ್ಕೂ ಮೊದಲು ಮಾಜಿ ನಾಯಕಿ ಮಿಥಾಲಿ ರಾಜ್ ಈ ಸಾಧನೆ ಮಾಡಿದ್ದಾರೆ. ಅವರು 7,805 ರನ್ಗಳನ್ನು ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News