×
Ad

ಆಸ್ಟ್ರೇಲಿಯದ ವಿರುದ್ಧ 1 ಸಾವಿರ ರನ್ ಪೂರೈಸಿದ ಸ್ಮತಿ ಮಂಧಾನ

Update: 2025-10-30 22:39 IST

ಸ್ಮತಿ ಮಂಧಾನ | Photo Credit : PTI 

ಮುಂಬೈ, ಅ.30: ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಮಹಿಳೆಯರ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡದ ವಿರುದ್ದ 1,000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಭಾರತದ 2ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಎಡಗೈ ಬ್ಯಾಟರ್ ಮಂಧಾನ ಗುರುವಾರ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಈ ಮೈಲ್ಲಿಗಲ್ಲು ತಲುಪಿದ್ದಾರೆ.

ಭಾರತದ ವಿರುದ್ಧ ವೇಗವಾಗಿ ಸಾವಿರ ರನ್ ತಲುಪಿದ ಮಂಧಾನ ಅವರು ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್‌ರೊಂದಿಗೆ ಸೇರಿಕೊಂಡರು. ಮಿಥಾಲಿ 37 ಇನಿಂಗ್ಸ್‌ಗಳಲ್ಲಿ 1,123 ರನ್ ಗಳಿಸಿದ್ದಾರೆ. ಮಂಧಾನ ಈ ಸಾಧನೆಗೈದ ವಿಶ್ವದ 10ನೇ ಆಟಗಾರ್ತಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News