ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ಸ್ಮೃತಿ ಮಂಧಾನ ನಾಮನಿರ್ದೇಶನ
Update: 2025-11-06 21:17 IST
ಸ್ಮೃತಿ ಮಂಧಾನ | Photo Credit :@ICC
ಹೊಸದಿಲ್ಲಿ, ನ.6: ಭಾರತ ಕ್ರಿಕೆಟ್ ತಂಡದ ಉಪ ನಾಯಕಿ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನರನ್ನು ಅಕ್ಟೋಬರ್ ತಿಂಗಳ ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
ಸ್ಮೃತಿ ಮಂಧಾನ ಅವರ ಅಮೋಘ ಪ್ರದರ್ಶನದ ನೆರವಿನಿಂದ ಭಾರತ ತಂಡವು ಇತ್ತೀಚೆಗೆ ತನ್ನ ಚೊಚ್ಚಲ ಏಕದಿನ ವಿಶ್ವಕಪ್ ಜಯಿಸಿತ್ತು.
ಸ್ಮೃತಿ ಮಂಧಾನ ಅವರು ಐಸಿಸಿ ತಿಂಗಳ ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾದ ನಾಯಕಿ ಲೌರಾ ವೊಲ್ವಾರ್ಟ್ ಹಾಗೂ ಆಸ್ಟ್ರೇಲಿಯದ ಆಲ್‌ರೌಂಡರ್ ಅಶ್ಲೆ ಗಾರ್ಡ್ನರ್ ರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.
ಸ್ಮೃತಿ ಮಂಧಾನ ವಿಶ್ವಕಪ್ ನಲ್ಲಿ 9 ಪಂದ್ಯಗಳಲ್ಲಿ ಒಟ್ಟು 434 ರನ್ ಗಳಿಸಿ ಭಾರತದ ಪರ ಅಗ್ರ ಸ್ಕೋರರ್ ಹಾಗೂ ಒಟ್ಟಾರೆ 2ನೇ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಒಂದೇ ಆವೃತ್ತಿಯ ವಿಶ್ವಕಪ್ ನಲ್ಲಿ ಗರಿಷ್ಠ ರನ್ ಗಳಿಸಿದ್ದ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್(2017ರಲ್ಲಿ 409 ರನ್)ದಾಖಲೆಯನ್ನು ಮುರಿದಿದ್ದಾರೆ.