×
Ad

ಟಿ20 ತ್ರಿಕೋನ ಸರಣಿಗೆ ತಂಡವನ್ನು ಪ್ರಕಟಿಸಿದ ದಕ್ಷಿಣ ಆಫ್ರಿಕ

Update: 2025-06-26 21:43 IST

PC : X

ಜೊಹಾನ್ಸ್‌ ಬರ್ಗ್: ಮುಂಬರುವ ಟಿ20 ತ್ರಿಕೋನ ಸರಣಿಗೆ ದಕ್ಷಿಣ ಆಫ್ರಿಕ ತನ್ನ 14 ಸದಸ್ಯರ ತಂಡವನ್ನು ಪ್ರಕಟಿಸಿದೆ. ಇತರ ಎರಡು ತಂಡಗಳಾದ ಜಿಂಬಾಬ್ವೆ ಮತ್ತು ನ್ಯೂಝಿಲ್ಯಾಂಡ್‌ ಅನ್ನು ಒಳಗೊಂಡ ಸರಣಿಯು ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಜುಲೈ 14ರಂದು ಆರಂಭಗೊಳ್ಳಲಿದೆ.

ಈ ಸರಣಿಯು ಈ ಮೂರು ದೇಶಗಳಿಗೆ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಸಿದ್ಧತಾ ಪಂದ್ಯಾವಳಿಯಾಗಲಿದೆ.

ಈವರೆಗೆ 50 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ರಸೀ ವಾನ್ ಡರ್ ಡಸನ್ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ನಾಲ್ವರು ಹೊಸಬರಿದ್ದಾರೆ. ಅವರೆಂದರೆ: ಕಾರ್ಬಿನ್ ಬಾಶ್, ಲುವಾನ್ ಡ್ರೆ ಪ್ರಿಟೋರಿಯಸ್, ರೂಬಿನ್ ಹರ್ಮನ್ ಮತ್ತು ಸೆನುರನ್ ಮುತ್ತುಸಾಮಿ.

ದೇಶಿ ಕ್ರೀಡಾಕೂಟಗಳಲ್ಲಿ ಉತ್ತಮ ನಿರ್ವಹಣೆ ನೀಡಿರುವುದಕ್ಕಾಗಿ ಈ ನಾಲ್ವರನ್ನು ಪುರಸ್ಕರಿಸಲಾಗಿದೆ.

ತಂಡದಲ್ಲಿ ಡೆವಾಲ್ಡ್ ಬ್ರೆವಿಸ್, ಮತ್ತು ವೇಗದ ಬೌಲರ್‌ ಗಳಾದ ಜೆರಾಲ್ಡ್ ಕೋಯಟ್ಝೀ ಮತ್ತು ನಾಂಡ್ರಿ ಬರ್ಗರ್ ಇದ್ದಾರೆ. ಅವರು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರುಪ್ರವೇಶ ಪಡೆದಿದ್ದಾರೆ. ವೇಗದ ಬೌಲಿಂಗ್‌ಗೆ ಲುಂಗಿ ಎಂಗಿಡಿ ಮತ್ತು ಕ್ವೆನ ಮಫಕ ಬಲ ತುಂಬಲಿದ್ದಾರೆ.

ತಂಡವು ಎರಡು ದಿನಗಳ ಸಿದ್ಧತಾ ಶಿಬಿರಕ್ಕಾಗಿ ಜುಲೈ 9ರಂದು ಪ್ರಿಟೋರಿಯದಲ್ಲಿ ಸೇರಲಿದೆ. ಬಳಿಕ ಜುಲೈ 11ರಂದು ಹರಾರೆಗೆ ಪ್ರಯಾಣಿಸಲಿದೆ.

►ತಂಡ: ರಸೀ ವಾನ್ ಡರ್ ಡಸನ್ (ನಾಯಕ), ಕಾರ್ಬಿನ್ ಬಾಶ್, ಡೆವಾಲ್ಡ್ ಬ್ರೆವಿಸ್, ನಾಂಡ್ರಿ ಬರ್ಗರ್, ಜೆರಾಲ್ಡ್ ಕೋಯಟ್ಝೀ, ರೀಝ ಹೆಂಡ್ರಿಕ್ಸ್, ರೂಬಿನ್ ಹರ್ಮನ್, ಜಾರ್ಜ್ ಲಿಂಡ್, ಕ್ವೆನ ಮಫಕ, ಸೆನುರಮ್ ಮುತ್ತುಸಾಮಿ, ಲುಂಗಿ ಎಂಗಿಡಿ, ನಕಬ ಪೀಟರ್, ಲುವಾನ್ ಡ್ರೆ ಪ್ರಿಟೋರಿಯಸ್ ಮತ್ತು ಆ್ಯಂಡಿಲ್ ಸೈಮ್‌ಲೇನ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News