ಸ್ಪೇಸ್ಎಕ್ಸ್ ನ ಸ್ಟಾರ್ಷಿಪ್ ರಾಕೆಟ್ ಸ್ಫೋಟ
Update: 2025-01-17 22:29 IST
ಸ್ಪೇಸ್ಎಕ್ಸ್ | NDTV
ನ್ಯೂಯಾರ್ಕ್ : ಸ್ಪೇಸ್ಎಕ್ಸ್ ನ ಸ್ಟಾರ್ಷಿಪ್ ರಾಕೆಟ್ 7ನೇ ಪರೀಕ್ಷಾ ಹಾರಾಟದಲ್ಲಿ ಸ್ಫೋಟಗೊಂಡಿದ್ದು ಎಲಾನ್ ಮಸ್ಕ್ ಒಡೆತನದ ಸಂಸ್ಥೆಗೆ ಅನಿರೀಕ್ಷಿತ ಹಿನ್ನಡೆಯಾಗಿದೆ.
ಸ್ಟಾರ್ಷಿಪ್ ರಾಕೆಟ್ನ ಸಾಮರ್ಥ್ಯ ವನ್ನು ಹೆಚ್ಚಿಸುವಲ್ಲಿ ಸ್ಪೇಸ್ಎಕ್ಸ್ ಸ್ಥಿರವಾದ ಪ್ರಗತಿಯನ್ನು ಸಾಧಿಸಿತ್ತು. ಸ್ಫೋಟಗೊಂಡ ರಾಕೆಟ್ನ ಅವಶೇಷದ ಹೊಡೆತದಿಂದ ದೂರ ಇರಲು ಮೆಕ್ಸಿಕೋ ಕೊಲ್ಲಿಯ ಮೇಲಿಂದ ಸಾಗುವ ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಇದು ಎಲಾನ್ ಮಸ್ಕ್ ಅವರ ರಾಕೆಟ್ ಕಾರ್ಯಕ್ರಮಕ್ಕೂ ಹಿನ್ನಡೆಯಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.