×
Ad

ವಿಶೇಷ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟ ದಿನ 4; ಭಾರತದ ಪದಕಗಳ ಸಂಖ್ಯೆ 24ಕ್ಕೆ ಏರಿಕೆ

Update: 2025-03-15 21:26 IST

PC : NDTV

ಹೊಸದಿಲ್ಲಿ: ಇಟಲಿಯ ಟುರಿನ್‌ ನಲ್ಲಿ ನಡೆಯುತ್ತಿರುವ ವಿಶೇಷ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ ಮೂರು ಮತ್ತು ನಾಲ್ಕನೇ ದಿನ ಭಾರತೀಯ ಅತ್ಲೀಟ್‌ಗಳು ಉತ್ತಮ ನಿರ್ವಹಣೆ ನೀಡಿದ್ದಾರೆ. ಈ ಎರಡು ದಿನಗಳಲ್ಲಿ ದೇಶದ ಪದಕ ಪಟ್ಟಿಗೆ 15 ಪದಕಗಳ ಸೇರ್ಪಡೆಯಾಗಿದೆ.

ಇದರೊಂದಿಗೆ ಈ ಕೂಟದಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 24ಕ್ಕೇರಿದೆ.

ಆಲ್ಪೈನ್ ಸ್ಕೀಯಿಂಗ್ ಸ್ಪರ್ಧೆಯಲ್ಲಿ, ದೀಪಕ್ ಠಾಕೂರ್ ಮತ್ತು ಗಿರಿಧರ್ ಅಮೋಘ ಕೌಶಲ್ಯವನ್ನು ಪ್ರದರ್ಶಿಸಿ, ಕ್ರಮವಾಗಿ ಇಂಟರ್‌ಮೀಡಿಯಟ್ ಸೂಪರ್ ಜಿ ಎಮ್‌04 ಮತ್ತು ಎಮ್‌05 ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದರು.

ನೊವೈಸ್ ಜಿ ಎಮ್‌01 ವಿಭಾಗದಲ್ಲಿ, ಅಭಿಶೇಕ್ ಕುಮಾರ್ ಬೆಳ್ಳಿ ಗೆದ್ದರು. ಇಂಟರ್‌ಮೀಡಿಯಟ್ ಸೂಪರ್ ಜಿ ಎಫ್‌03 ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿದ ರಾಧಾ ದೇವಿ ಬೆಳ್ಳಿ ಪದಕ ಗೆದ್ದರು.

ಮಂಜಿನಲ್ಲಿ, ಝಿಯಾರಾ ಪೋರ್ಟರ್ ಅಮೋಘ ವೇಗ ಮತ್ತು ದೃಢಚಿತ್ತ ಪ್ರದರ್ಶಿಸಿ, ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್‌ನ 111ಎಮ್ ಎಫ್‌1 ವಿಭಾಗ ಮತ್ತು 222ಎಮ್ ಎಫ್‌2 ವಿಭಾಗಗಳಲ್ಲಿ ಬೆಳ್ಳಿ ಪದಕಗಳನ್ನು ಜಯಿಸಿದರು. ತಂಶು 777ಎಮ್ ಎಮ್‌2 ವಿಭಾಗದಲ್ಲಿ ಕಂಚು ಮತ್ತು 500ಎಮ್ ಎಮ್‌3 ವಿಭಾಗದಲ್ಲಿ ಬೆಳ್ಳಿ ಪಡೆದರು.

ಕ್ರಾಸ್ ಕಂಟ್ರಿ ಸ್ಕೀಯಿಂಗ್‌ನಲ್ಲಿ ಆಕೃತಿ ಗಮನಾರ್ಹ ಸಾಧನೆಗೈದು, 50ಎಮ್ ಕ್ಲಾಸಿಕಲ್ ಟೆಕ್ನಿಕ್ ಫೈನಲ್ ಎಫ್‌03 ವಿಭಾಗದಲ್ಲಿ ಕಂಚು ಗೆದ್ದರು.

ಸ್ನೋಶೂಯಿಂಗ್ ಅತ್ಲೀಟ್‌ಗಳೂ ಭಾರತದ ಪದಕ ಪಟ್ಟಿಗೆ ಗಮನಾರ್ಹ ದೇಣಿಗೆ ನೀಡಿದರು. 50ಎಮ್ ರೇಸ್ ಎಮ್‌03 ವಿಭಾಗದಲ್ಲಿ ವಾಸು ತಿವಾರಿ ಚಿನ್ನ ಗೆದ್ದರೆ, 50ಎಮ್ ರೇಸ್ ಎಮ್‌04 ಮತ್ತು ಎಫ್‌02 ವಿಭಾಗಗಳಲ್ಲಿ ಕ್ರಮವಾಗಿ ಜಹಾಂಗೀರ್ ಮತ್ತು ತನ್ಯಾ ಬೆಳ್ಳಿ ಪದಕಗಳನ್ನು ಪಡೆದರು.

50ಎಮ್ ರೇಸ್ ಎಫ್‌03 ವಿಭಾಗದಲ್ಲಿ ಶಾಲಿನಿ ಚೌಹಾಣ್ ಕಂಚಿನ ಪದಕವನ್ನು ಗೆದ್ದರು. 200ಎಮ್ ರೇಸ್‌ನಲ್ಲಿ, ಎಮ್‌ಪಿ12 ವಿಭಾಗದಲ್ಲಿ ಅನಿಲ್ ಕುಮಾರ್ ಚಿನ್ನ ಗೆದ್ದರೆ, ಎಫ್‌12 ವಿಭಾಗದಲ್ಲಿ ಹರ್ಲೀನ್ ಕೌರ್ ಬೆಳ್ಳಿ ಪದಕವನ್ನು ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News