×
Ad

ಶ್ರೀಲಂಕಾಗೆ ಆರಂಭಿಕ ಆಘಾತ ನೀಡಿದ ಭಾರತೀಯ ವೇಗಿಗಳು

Update: 2023-11-02 19:49 IST

Photo: cricketworldcup.com

ವಿಶ್ವಕಪ್ : ಮುಂಬೈನ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾದ ಆರಂಭಿಕ ಮೂರು ವಿಕೆಟ್ ಕಬಳಿಸುದರೊಂದಿಗೆ ಮುಹಮ್ಮದ್ ಸಿರಾಜ್ ಆಘಾತ ನೀಡಿದರು.

ಭಾರತ ನೀಡಿದ ಕಠಿಣ ಗುರಿ ಬೆನ್ನಟ್ಟುವಲ್ಲಿ ಎಡವಿದ ಶ್ರೀಲಂಕಾ ಬ್ಯಾಟಿಂಗ್ ಸಂಪೂರ್ಣವಾಗಿ ಹಳಿತಪ್ಪಿತು. ಕೇವಲ 9.4ಓವರ್ ಗಳಲ್ಲಿ 6 ವಿಕೆಟ್ ಕಳದುಕೊಂಡು ಹೀನಾಯ ಸೋಲಿನತ್ತ ಹೆಜ್ಜೆ ಹಾಕಿದೆ. ಪಾತುಮ್ ನಿಸಾಂಕ ಶೂನ್ಯಕ್ಕೆ ಬುಮ್ರಾ ಗೆ ವಿಕೆಟ್ ನೀಡಿದರೆ ಕರುಣರತ್ನೆ , ಕುಸಾಲ್ ಮೆಂಡಿಸ್, ಸಮರವಿಕ್ರಮ ಕ್ರಮವಾಗಿ 0,1,0 ಗೆ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು. ಅಸಲಂಕಾ ಮತ್ತು ದುಶಾನ್ ಹೇಮಂತ ಔಟ್ ಮಾಡಿದ ಮುಹಮ್ಮದ್ ಶಮಿ ಬಹುತೇಕ ಪಂದ್ಯವನ್ನು ಭಾರತದ ಕಡೆ ತಿರುಗಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News