×
Ad

9 ರನ್‌ ಗೆ 6 ವಿಕೆಟ್: ನೂರನೇ ಪಂದ್ಯದಲ್ಲಿ ಸ್ಟಾರ್ಕ್ ಅಮೋಘ ಸಾಧನೆ

Update: 2025-07-15 21:29 IST

 ಮಿಚೆಲ್ ಸ್ಟಾರ್ಕ್ | PC : PTI 

ಜಮೈಕಾ: ಆಸ್ಟ್ರೇಲಿಯದ ಹಿರಿಯ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ವಿಂಡೀಸ್ ವಿರುದ್ಧ ಆಡಿರುವ ತನ್ನ 100ನೇ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.

ಸಬೀನಾ ಪಾರ್ಕ್‌ ನಲ್ಲಿ ಸೋಮವಾರ ನಡೆದ 3ನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ತನ್ನ ಮೊದಲ ಓವರ್‌ ನಲ್ಲಿ ಒಂದೂ ರನ್ ನೀಡದೆ 3 ವಿಕೆಟ್ ಗಳನ್ನು ಪಡೆದ ಸ್ಟಾರ್ಕ್ ಅವರು ಟೆಸ್ಟ್ ಇತಿಹಾಸದಲ್ಲಿ ವೇಗವಾಗಿ ಐದು ವಿಕೆಟ್ ಗೊಂಚಲು ಕಬಳಿಸಿದರು. ಮಾತ್ರವಲ್ಲ ತನ್ನ 400ನೇ ವಿಕೆಟನ್ನು ಪೂರೈಸಿದರು.

ಸ್ಟಾರ್ಕ್ 2002ರ ನಂತರ ಇನಿಂಗ್ಸ್‌ ನಲ್ಲಿ ಮೊದಲ ಓವರ್‌ ನಲ್ಲಿ 3 ವಿಕೆಟ್‌ ಗಳನ್ನು ಪಡೆದ 2ನೇ ಬೌಲರ್ ಆಗಿದ್ದಾರೆ. ಇರ್ಫಾನ್ ಪಠಾಣ್ 2006ರಲ್ಲಿ ಕರಾಚಿ ಟೆಸ್ಟ್‌ನಲ್ಲಿ ಆರಂಭಿಕ ಓವರ್‌ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.

ಸ್ಟಾರ್ಕ್ ಕೇವಲ 9 ರನ್ ನೀಡಿ 6 ವಿಕೆಟ್ ಗಳನ್ನು ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದರು.

ಕೇವಲ 15 ಎಸೆತಗಳಲ್ಲಿ 5 ವಿಕೆಟ್ ಗಳನ್ನು ಪೂರೈಸಿ ಹೊಸ ದಾಖಲೆ ಬರೆದರು.

►ಟೆಸ್ಟ್ ಕ್ರಿಕೆಟ್‌ ನಲ್ಲಿ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಪಡೆದ ಬೌಲರ್‌ ಗಳು

ಎಸೆತ          ಬೌಲರ್               ಎದುರಾಳಿ             ಸ್ಥಳ                ವರ್ಷ

15           ಮಿಚೆಲ್ ಸ್ಟಾರ್ಕ್     ವೆಸ್ಟ್‌‌ ಇಂಡೀಸ್     ಕಿಂಗ್‌ಸ್ಟನ್       2025

19           ಎರ್ನಿ ಟೊಶಾಕ್       ಭಾರತ                  ಬ್ರಿಸ್ಬೇನ್          1947

19           ಸ್ಟುವರ್ಟ್ ಬ್ರಾಡ್     ಆಸ್ಟ್ರೇಲಿಯ     ನಾಟಿಂಗ್‌ಹ್ಯಾಮ್     2015

19           ಬೋಲ್ಯಾಂಡ್        ಇಂಗ್ಲೆಂಡ್                 ಮೆಲ್ಬರ್ನ್          2021


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News