×
Ad

ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತದ 9ನೇ ಆಟಗಾರ ಮಾನವ್ ಸುಥರ್

Update: 2026-06-08 23:18 IST

Photo : BCCI 

ಹೊಸದಿಲ್ಲಿ, ಜೂ.8: ರಾಜಸ್ಥಾನದ ಎಡಗೈ ಸ್ಪಿನ್ನರ್ ಮಾನವ್ ಸುಥರ್ ಭಾರತ ಕ್ರಿಕೆಟ್ ತಂಡದ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ 319ನೇ ಕ್ರಿಕೆಟಿಗನಾಗಿದ್ದು, ಅಫ್ಘಾನಿಸ್ತಾನ ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಇನಿಂಗ್ಸ್ ಹಾಗೂ 300 ರನ್‌ಗಳ ಅಂತರದಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.

ಏಳು ವಿಕೆಟ್ ಗೊಂಚಲು ಪಡೆದು ಗೆಲುವಿನ ರೂವಾರಿಯಾದ ಸುಥರ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ 9ನೇ ಭಾರತೀಯ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಪ್ರವೀಣ್ ಆಮ್ರೆ, ಆರ್.ಪಿ. ಸಿಂಗ್, ಆರ್. ಅಶ್ವಿನ್, ಶಿಖರ್ ಧವನ್, ರೋಹಿತ್ ಶರ್ಮಾ, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ಹಾಗೂ ಯಶಸ್ವಿ ಜೈಸ್ವಾಲ್ ಅವರಿದ್ದಾರೆ.

‘‘ಸ್ಥಿರ ಪ್ರದರ್ಶನ ನೀಡುವುದು ಅತ್ಯಂತ ಮುಖ್ಯ ಎಂಬುದನ್ನು ನಾನು ಈ ಪಂದ್ಯದಿಂದ ಕಲಿತಿದ್ದೇನೆ. ಒಂದೇ ಸ್ಥಳದಲ್ಲಿ ಪದೇ ಪದೇ ಬೌಲಿಂಗ್ ಮಾಡುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಮುಖ್ಯವಾಗುತ್ತದೆ. ಟೆಸ್ಟ್ ಕ್ರಿಕೆಟ್ ಸಾಕಷ್ಟು ತಾಳ್ಮೆಯನ್ನು ಬಯಸುತ್ತದೆ. ತಾಳ್ಮೆಯಿಂದ, ತನ್ನ ಯೋಜನೆಗಳಿಗೆ ಬದ್ಧವಾಗಿ, ಸರಿಯಾದ ಸ್ಥಳಕ್ಕೆ ಚೆಂಡು ಎಸೆಯುವುದು ಅತ್ಯಂತ ಮುಖ್ಯ ಎಂಬುದನ್ನು ನಾನು ಈ ಪಂದ್ಯದಿಂದ ಕಲಿತುಕೊಂಡೆ’’ ಎಂದು ಸುಥರ್ ಹೇಳಿದ್ದಾರೆ.

► ಪುರುಷರ ಟೆಸ್ಟ್ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತೀಯ ಆಟಗಾರರು

ಪ್ರವೀಣ್ ಆಮ್ರೆ (ದಕ್ಷಿಣ ಆಫ್ರಿಕಾ ವಿರುದ್ಧ, 1992)

ಆರ್.ಪಿ. ಸಿಂಗ್ (ಪಾಕಿಸ್ತಾನದ ವಿರುದ್ಧ, 2006)

ರವಿಚಂದ್ರನ್ ಅಶ್ವಿನ್ (ವೆಸ್ಟ್ ಇಂಡೀಸ್ ವಿರುದ್ಧ, 2011)

ಶಿಖರ್ ಧವನ್ (ಆಸ್ಟ್ರೇಲಿಯ ವಿರುದ್ಧ, 2013)

ರೋಹಿತ್ ಶರ್ಮಾ (ವೆಸ್ಟ್ ಇಂಡೀಸ್ ವಿರುದ್ಧ, 2013)

ಪೃಥ್ವಿ ಶಾ (ವೆಸ್ಟ್ ಇಂಡೀಸ್ ವಿರುದ್ಧ, 2018)

ಶ್ರೇಯಸ್ ಅಯ್ಯರ್ (ನ್ಯೂಝಿಲ್ಯಾಂಡ್ ವಿರುದ್ಧ, 2021)

ಯಶಸ್ವಿ ಜೈಸ್ವಾಲ್ (ವೆಸ್ಟ್ ಇಂಡೀಸ್ ವಿರುದ್ಧ, 2023)

ಮಾನವ್ ಸುಥರ್ (ಅಫ್ಘಾನಿಸ್ತಾನದ ವಿರುದ್ಧ, 2026)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News