×
Ad

ಅಲನ್ ಬಾರ್ಡರ್ ಅವರನ್ನು ಹಿಂದಿಕ್ಕಿ ಆಸ್ಟ್ರೇಲಿಯದ ಎರಡನೇ ಗರಿಷ್ಠ ರನ್ ಸ್ಕೋರರ್ ಆದ ಸ್ಟೀವ್ ಸ್ಮಿತ್!

Update: 2025-12-27 22:14 IST

ಸ್ಟೀವ್ ಸ್ಮಿತ್ | Photo Credit : AP \ PTI 

ಮೆಲ್ಬರ್ನ್, ಡಿ.27: ಅಲನ್ ಬಾರ್ಡರ್ ಅವರನ್ನು ಹಿಂದಿಕ್ಕಿದ ಸ್ಟೀವ್ ಸ್ಮಿತ್ ಆಸ್ಟ್ರೇಲಿಯದ ಎರಡನೇ ಗರಿಷ್ಠ ರನ್ ಸ್ಕೋರರ್ ಎಂಬ ಕೀರ್ತಿಗೆ ಭಾಜನರಾದರು. ಎಂಸಿಜಿಯಲ್ಲಿ ಶನಿವಾರ ನಡೆದ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಸ್ಮಿತ್ ಈ ಐತಿಹಾಸಿಕ ಸಾಧನೆ ಮಾಡಿದರು.

ಹಿರಿಯ ಬ್ಯಾಟರ್ ಸ್ಮಿತ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 9 ರನ್ ಗಳಿಸಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಒಂದಷ್ಟು ಪ್ರತಿರೋಧ ಒಡ್ಡಿದ ಸ್ಮಿತ್ 39 ಎಸೆತಗಳಲ್ಲಿ ಔಟಾಗದೆ 24 ರನ್ ಗಳಿಸಿದರು. ಆಸ್ಟ್ರೇಲಿಯದ ಬ್ಯಾಟರ್‌ ಗಳು ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ಔಟಾದಾಗ ಸ್ಮಿತ್ ಒಂದಷ್ಟು ಪ್ರತಿರೋಧ ಒಡ್ಡಿದರು.

ಆ್ಯಶಸ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಸ್ಮಿತ್ ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸಾಲಿನಲ್ಲಿ ಬಾರ್ಡರ್‌ರನ್ನು ಹಿಂದಿಕ್ಕಿದ್ದಾರೆ. ಇಂಗ್ಲೆಂಡ್ ತಂಡದ ವಿರುದ್ಧ 40 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಮಿತ್ 72 ಇನಿಂಗ್ಸ್‌ಗಳಲ್ಲಿ 12 ಶತಕ ಹಾಗೂ 14 ಅರ್ಧಶತಕಗಳ ಸಹಿತ 55.51ರ ಸರಾಸರಿಯಲ್ಲಿ ಒಟ್ಟು 3,553 ರನ್ ಗಳಿಸಿದ್ದಾರೆ.

ಬಾರ್ಡರ್ ಅವರು ಇಂಗ್ಲೆಂಡ್ ವಿರುದ್ಧ 47 ಟೆಸ್ಟ್ ಪಂದ್ಯಗಳಲ್ಲಿ 56.31ರ ಸರಾಸರಿಯಲ್ಲಿ 8 ಶತಕ ಹಾಗೂ 21 ಅರ್ಧಶತಕಗಳ ಸಹಿತ 3,548 ರನ್ ಗಳಿಸಿದ್ದಾರೆ. ಸರ್ ಡಾನ್ ಬ್ರಾಡ್ಮನ್ ಅವರು 37 ಟೆಸ್ಟ್ ಪಂದ್ಯಗಳಲ್ಲಿ 89.78ರ ಸರಾಸರಿಯಲ್ಲಿ 5,028 ರನ್ ಗಳಿಸಿ ಸ್ಮಿತ್‌ ಗಿಂತ ಮುಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News