×
Ad

ಸುಲ್ತಾನ್ ಆಫ್ ಜೊಹೊರ್ ಕಪ್ | ಭಾರತ ಹಾಕಿ ತಂಡದ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದ ಆಸ್ಟ್ರೇಲಿಯ

Update: 2024-10-23 21:22 IST

PC : PTI 

ಜೊಹೊರ್ ಬಹ್ರೂ : ಸುಲ್ತಾನ್ ಜೊಹೊರ್ ಕಪ್‌ನಲ್ಲಿ ಬುಧವಾರ 4-0 ಅಂತರದಿಂದ ಜಯ ಸಾಧಿಸಿರುವ ಆಸ್ಟ್ರೇಲಿಯ ತಂಡವು ಭಾರತ ಹಾಕಿ ತಂಡದ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದೆ.

ಭಾರತದ ಫಾರ್ವರ್ಡ್ ಆಟಗಾರರು ಆಸ್ಟ್ರೇಲಿಯದ ಡಿಫೆಂಡರ್‌ಗೆ ಕಡಿವಾಣ ಹಾಕಲು ವಿಫಲವಾಗಿದ್ದು, ಡೇಕಿನ್ ಸ್ಟ್ರೇಂಜರ್ ಹ್ಯಾಟ್ರಿಕ್ ಗೋಲು(33,39,53ನೇ ನಿಮಿಷ)ಗಳಿಸಿದರೆ, ಪ್ಯಾಟ್ರಿಕ್ ಆಂಡ್ರೂ(29ನೇ ನಿಮಿಷ)ಗೋಲು ಖಾತೆ ತೆರೆದರು.

ಈ ಸೋಲಿನ ಹೊರತಾಗಿಯೂ ಭಾರತವು 9 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದೆ. ಆಸ್ಟ್ರೇಲಿಯ ತಂಡ ನ್ಯೂಝಿಲ್ಯಾಂಡ್ ಬಳಿಕ ಮೂರನೇ ಸ್ಥಾನದಲ್ಲಿದೆ. ರೌಂಡ್ ರಾಬಿನ್ ಲೀಗ್‌ನಲ್ಲಿ ಮೂರು ಗೆಲುವು ದಾಖಲಿಸಿರುವ ಭಾರತವು ಇನ್ನೊಂದು ಪಂದ್ಯ ಆಡಲು ಬಾಕಿ ಇದ್ದು, ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸುವ ಸ್ಪರ್ಧೆಯಲ್ಲಿದೆ.

ಭಾರತ ತಂಡ ಉತ್ತಮ ಆರಂಭ ಪಡೆದಿದ್ದರೂ ಆಸ್ಟ್ರೇಲಿಯದಿಂದ ಕಠಿಣ ಸವಾಲು ಎದುರಿಸಿದೆ. ವೇಗವಾಗಿ ಆಡಿದ ಆಸ್ಟ್ರೇಲಿಯ ಗೋಲು ಗಳಿಸುವ ಅವಕಾಶ ಸೃಷ್ಟಿಸಿಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News