×
Ad

ಸುಲ್ತಾನ್ ಜೊಹೊರ್ ಕಪ್ : ಭಾರತಕ್ಕೆ ಕಂಚು

Update: 2024-10-26 21:36 IST

PC : Hockey India

ಜೊಹೊರ್ ಬಹ್ರು (ಮಲೇಶ್ಯ) : ಮಲೇಶ್ಯದ ಜೊಹೊರ್ ಬಹ್ರುವಿನಲ್ಲಿ ನಡೆದ ಸುಲ್ತಾನ್ ಆಫ್ ಜೊಹೊರ್ ಕಪ್ 21 ವರ್ಷಕ್ಕಿಂತ ಕೆಳಗಿನ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಭಾರತವು ಶನಿವಾರ ನ್ಯೂಝಿಲ್ಯಾಂಡನ್ನು ಶೂಟೌಟ್‌ನಲ್ಲಿ 3-2 ಗೋಲುಗಳಿಂದ ಸೋಲಿಸಿ ಕಂಚಿನ ಪದಕ ಗೆದ್ದಿದೆ.

ಪಂದ್ಯವು ನಿಗದಿತ ಅವಧಿಯಲ್ಲಿ 2-2ರ ಸಮಬಲದಲ್ಲಿ ಮುಗಿದಾಗ ಫಲಿತಾಂಶ ನಿರ್ಧರಿಸಲು ಶೂಟೌಟ್ ಅನಿವಾರ್ಯವಾಯಿತು.

ಭಾರತೀಯ ಗೋಲ್‌ ಕೀಪರ್ ಬಿಕ್ರಮ್‌ ಜಿತ್ ಸಿಂಗ್ ಮೂರು ಗೋಲುಗಳನ್ನು ತಡೆಯುವ ಮೂಲಕ ಅಮೋಘ ಪ್ರದರ್ಶನವನ್ನು ನೀಡಿದಿರು. ಅದೇ ವೇಳೆ, ಗುರ್ಜೋತ್ ಸಿಂಗ್, ಮನ್ಮೀತ್ ಸಿಂಗ್ ಮತ್ತು ಸೌರಭ್ ಆನಂದ್ ಕುಶ್ವಾಹ ಶೂಟೌಟ್‌ನಲ್ಲಿ ಯಶಸ್ವಿಯಾಗಿ ಗೋಲು ಬಾರಿಸಿದರು.

ಇದಕ್ಕೂ ಮೊದಲು, ನಿಗದಿತ ಅವಧಿಯ ಆಟದ ವೇಳೆ, ಭಾರತದ ಪರವಾಗಿ ದಿಲ್‌ರಾಜ್ ಸಿಂಗ್ 11ನೇ ನಿಮಿಷದಲ್ಲಿ ಮತ್ತು ಮನ್ಮೀತ್ ಸಿಂಗ್ 20 ನೇ ನಿಮಿಷದಲ್ಲಿ ಗೋಲು ಬಾರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, ಪಂದ್ಯದದ ಅಂತಿಮ ಕ್ವಾರ್ಟರ್‌ ನಲ್ಲಿ ನ್ಯೂಝಿಲ್ಯಾಂಡ್ ಆಟಗಾರರು ಪ್ರತಿಹೋರಾಟ ನೀಡಿದರು. ಓವನ್ ಬ್ರೌನ್ 51ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಜಾಂಟಿ ಎಲ್ಮ್ಸ್ 57ನೇ ನಿಮಿಷದಲ್ಲಿ ಗೋಲು ದಾಖಲಿಸಿ ಅಂಕಪಟ್ಟಿಯನ್ನು ಸಮಬಲಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News