×
Ad

ಸುಲ್ತಾನ್ ಆಫ್ ಜೊಹೊರ್ ಕಪ್ ಜೂನಿಯರ್ ಹಾಕಿ ಪಂದ್ಯಾವಳಿ; ಭಾರತ-ಪಾಕಿಸ್ತಾನ 3-3 ಡ್ರಾ

Update: 2023-10-27 22:20 IST

Photo: twitter/TheHockeyIndia

ಜೊಹೊರ್ ಬಹ್ರು (ಮಲೇಶ್ಯ): ಮಲೇಶ್ಯದ ಜೊಹೊರ್ ಬಹ್ರು ನಗರದಲ್ಲಿ ಶುಕ್ರವಾರ ಆರಂಭಗೊಂಡ ಸುಲ್ತಾನ್ ಆಫ್ ಜೊಹೊರ್ ಕಪ್ ಜೂನಿಯರ್ ಹಾಕಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 3-3 ಗೋಲುಗಳ ಡ್ರಾ ಸಾಧಿಸುವಲ್ಲಿ ಭಾರತ ಯಶಸ್ವಿಯಾಗಿದೆ.

ಎರಡು ಬಾರಿ ಹಿನ್ನಡೆ ಅನುಭವಿಸಿದ ಹೊರತಾಗಿಯೂ ಭಾರತವು ಪುಟಿದೆದ್ದು ಪಾಕಿಸ್ತಾನವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಭಾರತದ ಪರವಾಗಿ 30ನೇ ನಿಮಿಷದಲ್ಲಿ ಅಮನ್‍ದೀಪ್ ಲಾಕ್ರ, 56ನೇ ನಿಮಿಷದಲ್ಲಿ ಅರ್ಜುನ್ ಲಾಲಗೆ ಮತ್ತು 59ನೇ ನಿಮಿಷದಲ್ಲಿ ಉತ್ತಮ್ ಸಿಂಗ್ ಗೋಲು ಬಾರಿಸಿದರು.

ಪಾಕಿಸ್ತಾನದ ಪರವಾಗಿ 31 ಮತ್ತು 58ನೇ ನಿಮಿಷಗಳಲ್ಲಿ ಅರ್ಬಾಝ್ ಅಹಮ್ಮದ್ ಮತ್ತು 49ನೇ ನಿಮಿಷದಲ್ಲಿ ಅಬ್ದುಲ್ ಶಾಹಿದ್ ಗೋಲುಗಳನ್ನು ಗಳಿಸಿದರು.

ಭಾರತ ಶನಿವಾರ ಆತಿಥೇಯ ಮಲೇಶ್ಯವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News