×
Ad

ನಾಯಕನ ನಡವಳಿಕೆ ಅತ್ಯಂತ ಮುಖ್ಯ: ಗಿಲ್‌ ಗೆ ಸುನೀಲ್ ಗವಾಸ್ಕರ್ ಕಿವಿಮಾತು

Update: 2025-05-26 21:41 IST

ಸುನೀಲ್ ಗವಾಸ್ಕರ್ , ಶುಭಮನ್ ಗಿಲ್ |PC : X

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನೂತನ ನಾಯಕ ಶುಭಮನ್ ಗಿಲ್ ಜೂನ್ 20ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವಾಗ ತಮ್ಮ ನಡವಳಿಕೆಯ ಬಗ್ಗೆ ಜಾಗರೂಕರಾಗಿರಬೇಕು ಎಂದು ಭಾರತದ ದಂತಕತೆ ಸುನೀಲ್ ಗವಾಸ್ಕರ್ ಕಿವಿಮಾತು ಹೇಳಿದ್ದಾರೆ.

‘‘ಭಾರತ ತಂಡದ ನಾಯಕನಾಗಿ ಆಯ್ಕೆಯಾಗುವ ಆಟಗಾರನಿಗೆ ಯಾವಾಗಲೂ ಒತ್ತಡವಿರುತ್ತದೆ. ತಂಡದ ಸದಸ್ಯರಾಗಿರುವುದಕ್ಕೂ, ಹಾಗೂ ನಾಯಕನಾಗುವುದಕ್ಕೂ ದೊಡ್ಡ ವ್ಯತ್ಯಾಸ ಇರುತ್ತದೆ. ಏಕೆಂದರೆ, ತಂಡದ ಸದಸ್ಯರಾಗಿರುವಾಗ ನೀವು ಸಾಮಾನ್ಯವಾಗಿ ಹತ್ತಿರವಿರುವ ಆಟಗಾರರೊಂದಿಗೆ ಸಂವಹನ ನಡೆಸುತ್ತೀರಿ. ಆದರೆ ನೀವು ನಾಯಕನಾದಾಗ, ತಂಡದ ಇತರ ಆಟಗಾರರು ನಿಮ್ಮನ್ನು ಗೌರವಿಸುವ ರೀತಿಯಲ್ಲಿ ನೀವು ವರ್ತಿಸಬೇಕು. ನಾಯಕನ ನಡವಳಿಕೆಯು ಅವರ ಪ್ರದರ್ಶನಕ್ಕಿಂತ ಮುಖ್ಯವಾಗಿದೆ’’ ಎಂದು ಗವಾಸ್ಕರ್ ಹೇಳಿದರು.

ಇಂಗ್ಲೆಂಡ್‌ ನಲ್ಲಿ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಶನಿವಾರ ತಂಡವನ್ನು ಪ್ರಕಟಿಸಲಾಗಿದ್ದು, 25ರ ಹರೆಯದ ಗಿಲ್ ಅವರನ್ನು ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಹೆಸರಿಸಲಾಯಿತು.

‘‘ಈ ಅವಕಾಶ ಪಡೆಯಲು ಸಾಧ್ಯವಾಗಿರುವುದು ದೊಡ್ಡ ಗೌರವ. ಇದು ದೊಡ್ಡ ಜವಾಬ್ದಾರಿ. ನಾನು ಈ ರೋಮಾಂಚಕಾರಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ. ಇಂಗ್ಲೆಂಡ್‌ ನಲ್ಲಿ ಮುಂಬರುವ ಸರಣಿಯು ತುಂಬಾ ರೋಮಾಂಚನಕಾರಿಯಾಗಲಿದೆ ಎಂದು ಭಾವಿಸುತ್ತೇನೆ’’ ಎಂದು ಗಿಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News