×
Ad

ಕಳಪೆ ಫಾರ್ಮ್ ಮುಂದುವರಿಸಿದ ಭಾರತದ T20 ತಂಡದ ನಾಯಕ ಸೂರ್ಯಕುಮಾರ್

Update: 2026-06-03 22:25 IST

ಸೂರ್ಯಕುಮಾರ್ ಯಾದವ್ |Photo Credit : PTI

ಮುಂಬೈ, ಜೂ.3: ಭಾರತದ ಟ್ವೆಂಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್ ಮುಂದುವರಿದಿದೆ.

ಐರ್ಲ್ಯಾಂಡ್ ಹಾಗೂ ಇಂಗ್ಲೆಂಡ್ ಪ್ರವಾಸದ ವೇಳೆ ಅವರು ರಾಷ್ಟ್ರೀಯ ತಂಡದ ನಾಯಕತ್ವದಲ್ಲಿ ಮುಂದುವರಿಯುವರೇ ಎಂಬ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ, ಮಂಗಳವಾರ ನಡೆದ ಟಿ-20 ಮುಂಬೈ ಲೀಗ್ ಪಂದ್ಯದಲ್ಲಿ ಟ್ರಂಪ್ ನೈಟ್ಸ್ ತಂಡವನ್ನು ಮುನ್ನಡೆಸಿದ ಸೂರ್ಯಕುಮಾರ್ ಕೇವಲ 11 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು.

189 ರನ್‌ಗಳ ಗುರಿ ಬೆನ್ನಟ್ಟಿದ ಟ್ರಂಪ್ ನೈಟ್ಸ್ ತಂಡವು 8 ವಿಕೆಟ್‌ಗಳಿಗೆ 188 ರನ್ ಗಳಿಸಿ ಒಂದು ರನ್ ಅಂತರದಲ್ಲಿ ಸೋಲು ಅನುಭವಿಸಿತು.

ಫೆಬ್ರವರಿ-ಮಾರ್ಚ್‌ನಲ್ಲಿ ಭಾರತವನ್ನು ಸತತ ಎರಡನೇ ಬಾರಿ ಟ್ವೆಂಟಿ-20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ್ದರೂ, ಸೂರ್ಯಕುಮಾರ್ ವೈಯಕ್ತಿಕವಾಗಿ ಒಂಬತ್ತು ಪಂದ್ಯಗಳಲ್ಲಿ 30.25ರ ಸರಾಸರಿಯಲ್ಲಿ 242 ರನ್ ಗಳಿಸಿದ್ದರು.

ಈ ಸಾಲಿನ ಐಪಿಎಲ್‌ನಲ್ಲೂ ಅವರ ಬ್ಯಾಟಿಂಗ್ ನಿರೀಕ್ಷಿತ ಮಟ್ಟ ತಲುಪಲಿಲ್ಲ. 13 ಪಂದ್ಯಗಳಲ್ಲಿ 20.76ರ ಸರಾಸರಿಯಲ್ಲಿ ಕೇವಲ 260 ರನ್ ಗಳಿಸಿದ್ದು, ಎರಡು ಅರ್ಧಶತಕಗಳಿಗೆ ಮಾತ್ರ ಸೀಮಿತರಾಗಿದ್ದರು. ಅವರು ಪ್ರತಿನಿಧಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಲೀಗ್ ಹಂತದಲ್ಲೇ ಹೊರಬಿದ್ದಿತ್ತು.

ಭಾರತ ತಂಡವು ಈ ತಿಂಗಳಾಂತ್ಯದಲ್ಲಿ ಬೆಲ್ಫಾಸ್ಟ್‌ನಲ್ಲಿ ಐರ್ಲ್ಯಾಂಡ್ ವಿರುದ್ಧ ಎರಡು ಟ್ವೆಂಟಿ-20 ಪಂದ್ಯಗಳನ್ನು ಆಡಲಿದ್ದು, ಮೊದಲ ಪಂದ್ಯ ಜೂನ್ 26ರಂದು ಹಾಗೂ ಎರಡನೇ ಪಂದ್ಯ ಜೂನ್ 28ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News