×
Ad

ವಿಜಯ್ ಹಝಾರೆ ಟ್ರೋಫಿ | 84 ಬಾಲ್‌ಗಳಲ್ಲಿ 190 ರನ್ ಸಿಡಿಸಿ ದಾಖಲೆ ಬರೆದ ವೈಭವ್ ಸೂರ್ಯವಂಶಿ

Update: 2025-12-24 13:43 IST

ವೈಭವ್ ಸೂರ್ಯವಂಶಿ (Photo: PTI)

ಹೊಸದಿಲ್ಲಿ: ವಿಜಯ್ ಹಝಾರೆ ಟ್ರೋಫಿಯಲ್ಲಿ ಕೇವಲ 84 ಬಾಲ್‌ಗಳಲ್ಲಿ 190 ರನ್ ಸಿಡಿಸುವ ಮೂಲಕ, ಯುವ ಪ್ರತಿಭಾನ್ವಿತ 14 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ ಹಲವು ವಿಶ್ವ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ 150 ರನ್ ಗಳಿಸುವ ಮೂಲಕ ವಿಶ್ವ ದಾಖಲೆಯನ್ನು ಅವರು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದಲ್ಲದೆ, ವೃತ್ತಿಪರ ಕ್ರಿಕೆಟ್‌ನಲ್ಲಿ ಕೇವಲ 14 ವರ್ಷದಲ್ಲಿಯೇ ಶತಕ ಬಾರಿಸಿದ ದಾಖಲೆಯೂ ಅವರ ಹೆಸರಿಗೆ ವರ್ಗಾವಣೆಗೊಂಡಿದೆ.

ಅರುಣಾಚಲ ಪ್ರದೇಶ ತಂಡದೆದುರು ನಡೆಯುತ್ತಿರುವ ವಿಜಯ್ ಹಝಾರೆ ಏಕದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಈ ಎರಡು ವಿಶ್ವ ದಾಖಲೆಗಳನ್ನು ಮಾಡಿದ್ದಾರೆ.

ಶತಕವನ್ನು ಅತ್ಯಂತ ವೇಗವಾಗಿ ಗಳಿಸಿದ ವೈಭವ್ ಸೂರ್ಯವಂಶಿ, 150 ರನ್‌ಗಳ ಗಡಿಯನ್ನು ಕೇವಲ 54 ಬಾಲ್‌ಗಳಲ್ಲಿ ದಾಟಿದರು. ಆ ಮೂಲಕ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಇದುವರೆಗೆ ಕೇವಲ 64 ಬಾಲ್‌ಗಳಲ್ಲಿ 150 ರನ್ ಗಳಿಸಿದ್ದ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಮುರಿದರು.

ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ, ಕೇವಲ 84 ಬಾಲ್‌ಗಳಲ್ಲಿ 16 ಬೌಂಡರಿ ಹಾಗೂ 15 ಸಿಕ್ಸರ್‌ಗಳ ನೆರವಿನಿಂದ ಅಮೋಘ 190 ರನ್ ಪೇರಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News