×
Ad

ಸೈಯದ್ ಮುಷ್ತಾಕ್ ಅಲಿ ಟ್ರೋಫಿ | 20 ಓವರ್ ಗಳಲ್ಲಿ 349 ರನ್ ಚಚ್ಚಿ ವಿಶ್ವದಾಖಲೆ ನಿರ್ಮಿಸಿದ ಬರೋಡಾ!

Update: 2024-12-05 15:33 IST

PC : BCCI

ಇಂದೋರ್: ಇಲ್ಲಿ ಸಿಕ್ಕಿಂ ತಂಡದ ವಿರುದ್ಧ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ 20 ಓವರ್ ಗಳಲ್ಲಿ 349 ರನ್ ಗಳನ್ನು ಸಿಡಿಸುವ ಮೂಲಕ, ಟಿ-20 ಕ್ರಿಕೆಟ್ ಮಾದರಿಯಲ್ಲಿ ಬರೋಡಾ ತಂಡ ನೂತನ ವಿಶ್ವದಾಖಲೆ ಬರೆದಿದೆ. ಭಾನು ಪನಿಯ 51 ಬಾಲ್ ಗಳಲ್ಲಿ ಸಿಡಿಸಿದ 134 ರನ್ ಗಳ ನೆರವಿನಿಂದ ಬರೋಡಾ ತಂಡ ಕೇವಲ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 349 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. 

ಇದಲ್ಲದೆ, ಒಂದೇ ಇನಿಂಗ್ಸ್ ನಲ್ಲಿ ಸಿಡಿಸಲಾಗಿದ್ದ ಅತ್ಯಧಿಕ ಸಿಕ್ಸರ್ ಗಳ ದಾಖಲೆಯನ್ನೂ ಬರೋಡಾ ತಂಡ ಪುಡಿಗಟ್ಟಿತು. ಅದು ಒಟ್ಟು 37 ಸಿಕ್ಸರ್ ಗಳನ್ನು ತನ್ನ ಖಾತೆಗೆ ಜಮಾ ಮಾಡಿಕೊಂಡಿತು. ಈ ಪೈಕಿ ಭಾನು ಪನಿಯ ಒಬ್ಬರೇ 15 ಸಿಕ್ಸರ್ ಗಳನ್ನು ಸಿಡಿಸಿದ್ದರಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 300ರ ಗಡಿ ದಾಟಿದ ಮೊದಲ ತಂಡವೆಂಬ ಶ್ರೇಯಕ್ಕೆ ಬರೋಡಾ ಭಾಜನವಾಯಿತು.

ಈ ಪಂದ್ಯದಲ್ಲಿ ತಮ್ಮ ನಿಗದಿತ ನಾಲ್ಕು ಓವರ್ ಗಳಲ್ಲಿ 81 ರನ್ ಗಳನ್ನು ನೀಡುವ ಮೂಲಕ ಸಿಕ್ಕಿಂನ ರೋಶನ್ ಕುಮಾರ್ ಅತ್ಯಂತ ದುಬಾರಿ ಬೌಲರ್ ಎನಿಸಿದರು. ಇದಕ್ಕೂ ಮುನ್ನ 2024ರ ಐಪಿಎಲ್ ಕ್ರೀಡಾಕೂಟದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಪ್ರತಿನಿಧಿಸಿದ್ದ ಮೋಹಿತ್ ಶರ್ಮ, ದಿಲ್ಲಿ ಕ್ಯಾಪಿಟಲ್ಸ್ ತಂಡದೆದುರು ನಿಗದಿತ ನಾಲ್ಕು ಓವರ್ ಗಳಲ್ಲಿ 73 ರನ್ ಬಿಟ್ಟುಕೊಟ್ಟಿದ್ದದ್ದೇ ಇದುವರೆಗಿನ ದುಬಾರಿ ಬೌಲಿಂಗ್ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News