×
Ad

ಬಾರ್ಬಡೋಸ್‌ನಲ್ಲಿ ಚಂಡಮಾರುತ ಭೀತಿ: T20 ವಿಶ್ವಕಪ್‌ ವಿಜೇತ ಭಾರತ ತಂಡದ ಸ್ವದೇಶ ವಾಪಸಾತಿಯಲ್ಲಿ ವಿಳಂಬ

Update: 2024-07-01 11:14 IST

Photo:X/BCCI

ಹೊಸದಿಲ್ಲಿ: ಟಿ20 ವಿಶ್ವಕಪ್‌ ವಿಜೇತ ಭಾರತೀಯ ಕ್ರಿಕೆಟ್‌ ತಂಡದ ಸ್ವದೇಶ ವಾಪಸಾತಿಯು ಬಾರ್ಬೋಡಸ್‌ನಲ್ಲಿ ಚಂಡಮಾರುತ ಭೀತಿಯಿಂದಾಗಿ ವಿಳಂಬವುಂಟಾಗಿದೆ. ವಿಮಾನ ಸೇವೆಯಲ್ಲಿ ಸ್ಥಗಿತದ ಕಾರಣ ಟೀಮ್‌ ಇಂಡಿಯಾ ಆಟಗಾರರು ತಮ್ಮ ಹೋಟೆಲ್‌ಗಳಲ್ಲಿಯೇ ಉಳಿಯುವಂತಾಗಿದೆ ಎಂದು ವರದಿಯಾಗಿದೆ.

ಚಂಡಮಾರುತ ಬೆರಿಲ್‌ ಅಪ್ಪಳಿಸುವ ನಿರೀಕ್ಷೆಯಿರುವುದರಿಂದ ಬಾರ್ಬಡೋಸ್‌ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು ಎಲ್ಲಾ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಚಂಡಮಾರುತ ಕೆಟಗರಿ 4ಕ್ಕೆ ಸೇರಿರುವುದರಿಂದ ಹಾಗೂ ತೀವ್ರವಾಗುವ ಸಾಧ್ಯತೆಯಿರುವುದರಿಂದ ವಿಮಾನ ಸೇವೆಗಳಿಗೆ ಅನುಮತಿ ನೀಡಲಾಗಿಲ್ಲ.

ಚಂಡಮಾರುತ ಬೆರಿಲ್‌ ವಿಂಡ್‌ವರ್ಡ್‌ ದ್ವೀಪಕ್ಕೆ ಅಪ್ಪಳಿಸುವ ನಿರೀಕ್ಷೆಯಿದ್ದು ಗಂಟೆಗೆ 130 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ ಹಾಗೂ 3ರಿಂದ 6 ಇಂಚಿನಷ್ಟು ಮಳೆಯ ನಿರೀಕ್ಷೆಯೂ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News