×
Ad

ಮೂರನೇ ಟ್ವೆಂಟಿ-20: ಭಾರತದ ಗೆಲುವಿಗೆ 160 ರನ್ ಗುರಿ ನೀಡಿದ ವಿಂಡೀಸ್

Update: 2023-08-08 21:50 IST

Photo: twitter \ @ICC

ಗಯಾನ: ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ ಮೂರನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಗೆಲುವಿಗೆ 160 ರನ್ ಗುರಿ ನೀಡಿದೆ.

ಮಂಗಳವಾರ ಟಾಸ್ ಜಯಿಸಿದ ವಿಂಡೀಸ್ ನಾಯಕ ರೊವ್‌ಮನ್ ಪೊವೆಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ವಿಂಡೀಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು

ಇನಿಂಗ್ಸ್ ಆರಂಭಿಸಿದ ಬ್ರೆಂಡನ್ ಕಿಂಗ್ (42 ರನ್, 42 ಎಸೆತ) ಹಾಗೂ ಕೈಲ್ ಮೇಯರ್ಸ್(25 ರನ್, 20 ಎಸೆತ)ಮೊದಲ ವಿಕೆಟ್‌ಗೆ 55 ರನ್ ಜೊತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ನಾಯಕ ರೊವ್‌ಮನ್ ಪೊವೆಲ್ ಔಟಾಗದೆ 40 ರನ್(19 ಎಸೆತ)ಗಳಿಸಿ ತಂಡದ ಮೊತ್ತವನ್ನು 159ಕ್ಕೆ ತಲುಪಿಸಿದರು.

ನಿಕೊಲಸ್ ಪೂರನ್(20 ರನ್) ಹಾಗೂ ಚಾರ್ಲ್ಸ್(12 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

ಭಾರತದ ಪರ ಕುಲದೀಪ್ ಯಾದವ್(3-28)ಯಶಸ್ವಿ ಬೌಲರ್ ಎನಿಸಿಕೊಂಡರು. ಅಕ್ಷರ್ ಪಟೇಲ್ (1-24) ಹಾಗೂ ಮುಕೇಶ್ ಕುಮಾರ್(1-19)ತಲಾ ಒಂದು ವಿಕೆಟ್ ಪಡೆದರು.

ಸರಣಿಯಲ್ಲಿ 0-2 ಹಿನ್ನಡೆಯಲ್ಲಿರುವ ಭಾರತಕ್ಕೆ ಸ್ಪರ್ಧೆಯಲ್ಲಿರಲು ಈ ಪಂದ್ಯವನ್ನು ಜಯಿಸಲೇಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News