×
Ad

ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20 ಸರಣಿ: ಭಾರತ ತಂಡದಲ್ಲಿ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾಗೆ ಸ್ಥಾನ

Update: 2023-07-05 23:41 IST

Yashasvi Jaiswal  | Photo: NDTV.com 

ಹೊಸದಿಲ್ಲಿ: ವೆಸ್ಟ್‌ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೆ ಬಿಸಿಸಿಐ 15 ಸದಸ್ಯರನ್ನು ಒಳಗೊಂಡ ಭಾರತ ತಂಡವನ್ನು ಬುಧವಾರ ಪ್ರಕಟಿಸಿದೆ. ಯುವ ಬ್ಯಾಟಿಂಗ್ ಸ್ಟಾರ್‌ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ತಿಲಕ್ ವರ್ಮಾಗೆ ಮೊದಲ ಬಾರಿ ಸ್ಥಾನ ನೀಡಲಾಗಿದೆ.

ಹಾರ್ದಿಕ್ ಪಾಂಡ್ಯ ಚುಟುಕು ಮಾದರಿಯ ಕ್ರಿಕೆಟ್‌ನ ನಾಯಕನಾಗಿ ಮುಂದುವರಿಯಲಿದ್ದು, ಸೂರ್ಯಕುಮಾರ್ ಉಪ ನಾಯಕನಾಗಿದ್ದಾರೆ.

ಟೆಸ್ಟ್ ಹಾಗೂ ಏಕದಿನ ತಂಡಗಳಲ್ಲಿ ಸ್ಥಾನ ಪಡೆದಿರುವ ವೇಗದ ಬೌಲರ್ ಮುಕೇಶ್ ಕುಮಾರ್ ಟ್ವೆಂಟಿ-20 ತಂಡದಲ್ಲೂ ಸ್ಥಾನ ಪಡೆದಿದ್ದಾರೆ.

ಟ್ವೆಂಟಿ-20 ಸರಣಿಯು ಆಗಸ್ಟ್ 3ರಂದು ಟ್ರಿನಿಡಾಡ್‌ನಲ್ಲಿ ಆರಂಭವಾಗಲಿದೆ. ಸೀನಿಯರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ಮತ್ತೊಮ್ಮೆ ಕೈಬಿಡಲಾಗಿದೆ.

ಹೈದರಾಬಾದ್ ಬ್ಯಾಟರ್ ತಿಲಕ್ ವರ್ಮಾ ಕಳೆದ 2 ವರ್ಷಗಳಿಂದ ಮುಂಬೈ ಇಂಡಿಯನ್ಸ್ ನ ಪ್ರಮುಖ ಸದಸ್ಯರಾಗಿದ್ದಾರೆ.

ಭಾರತದ ಟ್ವೆಂಟಿ-20 ತಂಡ ಇಶಾನ್ ಕಿಶನ್(ವಿಕೆಟ್‌ಕೀಪರ್), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್(ಉಪನಾಯಕ), ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ(ನಾಯಕ), ಅಕ್ಷರ್ ಪಟೇಲ್, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್‌ಖಾನ್ ಹಾಗೂ ಮುಕೇಶ್ ಕುಮಾರ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News