×
Ad

ಪ್ರೊ ಕಬಡ್ಡಿ ಲೀಗ್: ತಮಿಳ್ ತಲೈವಾಸ್ ಜಯಭೇರಿ

Update: 2024-01-11 00:05 IST

ಮುಂಬೈ: ಪ್ರೊ ಕಬಡ್ಡಿ ಲೀಗ್ ನ 65ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ಯು.ಪಿ. ಯೋಧಾಸ್ ವಿರುದ್ಧ 19 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ವಿಜೇತ ತಲೈವಾಸ್ 46 ಅಂಕ ಗಳಿಸಿದರೆ, ಯೋಧಾಸ್ 27 ಅಂಕ ಗಳಿಸಲಷ್ಟೇ ಶಕ್ತವಾಯಿತು.

ತಲೈವಾಸ್ ಪರ ನರೇಂದರ್ ಹೊಶಿಯಾರ್ (14 ಅಂಕ) ಸರ್ವಾಧಿಕ ಸ್ಕೋರ್ ಗಳಿಸಿದರು. ಯು.ಪಿ.ಯೋಧಾಸ್ ಪರ ವಿಜಯ್ ಮಲಿಕ್ ಪರ್ಪೆಕ್ಟ್ ಟೆನ್(10)ಗಳಿಸಿ ಗಮನ ಸೆಳೆದರು.

ಯು ಮುಂಬಾ-ಹರ್ಯಾಣ ಪಂದ್ಯ ಡ್ರಾ

ಲೀಗ್ನ 66ನೇ ಪಂದ್ಯದಲ್ಲಿ ಸಮಬಲದ ಹೋರಾಟ ನೀಡಿರುವ ಯು ಮುಂಬಾ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು 44-44ರಿಂದ ಡ್ರಾ ಸಾಧಿಸಿವೆ. ಯು ಮುಂಬಾ ಪರ ಅಮಿರ್ ಮುಹಮ್ಮದ್ 14 ಅಂಕ ಗಳಿಸಿದರು. ಹರ್ಯಾಣದ ಪರ ಜಗದೀಪ್ 8, ಚಂದ್ರನ್, ವಿಜಯ್ ಹಾಗೂ ಸಿದ್ದಾರ್ಥ್ ದೇಸಾಯಿ ತಲಾ 7 ಅಂಕ ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News