ರೋಹಿತ್ ಶರ್ಮಾ ಸಿಕ್ಸರ್ ದಾಖಲೆ ಮುರಿದ ಯುಎಇ ನಾಯಕ ವಸೀಂ
ಮುಹಮ್ಮದ್ ವಸೀಂ | PC : X
ದುಬೈ, ಸೆ.2: ಯುಎಇ ಕ್ರಿಕೆಟ್ ತಂಡದ ನಾಯಕ ಮುಹಮ್ಮದ್ ವಸೀಂ ನಾಯಕನಾಗಿ ಅತ್ಯಂತ ಹೆಚ್ಚು ಸಿಕ್ಸರ್ ಗಳನ್ನು ಸಿಡಿಸಿದ ರೋಹಿತ್ ಶರ್ಮಾರ ದಾಖಲೆಯನ್ನು ಮುರಿದಿದ್ದಾರೆ.
ಸೋಮವಾರ ಶಾರ್ಜಾದಲ್ಲಿ ನಡೆದ ಅಫ್ಘಾನಿಸ್ತಾನ ತಂಡದ ವಿರುದ್ಧ ಯುಎಇ ತಂಡ ಆಡಿರುವ ತ್ರಿಕೋನ ಸರಣಿ ಟಿ-20 ಪಂದ್ಯದಲ್ಲಿ ವಸೀಂ ಈ ಸಾಧನೆ ಮಾಡಿದ್ದಾರೆ.
ಯುಎಇ ತಂಡದ ಇನಿಂಗ್ಸ್ ನ 3ನೇ ಓವರ್ ನಲ್ಲಿ ಅಫ್ಘಾನಿಸ್ತಾನ ತಂಡದ ಸ್ಪಿನ್ನರ್ ಮುಜೀಬ್‌ವುರ‌್ರಹ್ಮಾನ್ ಬೌಲಿಂಗ್ ನಲ್ಲಿ 2 ಸಿಕ್ಸರ್‌ಗಳನ್ನು ಸಿಡಿಸಿದ ವಸೀಂ ಈ ದಾಖಲೆ ನಿರ್ಮಿಸಿದ್ದಾರೆ. ಯುಎಇ ತಂಡ ಅಫ್ಘಾನಿಸ್ತಾನ ತಂಡ ನೀಡಿದ 189 ರನ್ ಗುರಿ ಚೇಸ್ ವೇಳೆ ಎಡವಿದೆ.
ರೋಹಿತ್ 35 ಪಂದ್ಯಗಳಲ್ಲಿ 105 ಸಿಕ್ಸರ್‌ಗಳನ್ನು ಸಿಡಿಸಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, 34 ಪಂದ್ಯಗಳಲ್ಲಿ 86 ಸಿಕ್ಸರ್‌ಗಳನ್ನು ಸಿಡಿಸಿರುವ ಇಯಾನ್ ಮೊರ್ಗನ್ 3ನೇ ಸ್ಥಾನದಲ್ಲಿದ್ದಾರೆ.
*ಟಿ-20 ಕ್ರಿಕೆಟ್‌ನಲ್ಲಿ ನಾಯಕನಾಗಿ ಅತ್ಯಂತ ಹೆಚ್ಚು ಸಿಕ್ಸರ್ ಸಿಡಿಸಿದವರು
106*-ಮುಹಮ್ಮದ್ ವಸೀಂ(ಯುಎಇ)
105-ರೋಹಿತ್ ಶರ್ಮಾ(ಭಾರತ)
86-ಇಯಾನ್ ಮೊರ್ಗನ್(ಇಂಗ್ಲೆಂಡ್)
82-ಆ್ಯರೊನ್ ಫಿಂಚ್(ಆಸ್ಟ್ರೇಲಿಯ)
79-ಕಡೊವಾಕಿ ಫ್ಲೆಮಿಂಗ್(ಜಪಾನ್)
69-ಜೋಸ್ ಬಟ್ಲರ್(ಇಂಗ್ಲೆಂಡ್)