×
Ad

‌ಅಂಡರ್‌ 19 ಕ್ರಿಕೆಟ್: ಮೆಟ್ಟಿಲುಗಳ ಮೇಲೆ ಕುಳಿತು ಮಗನ ಆಟ ವೀಕ್ಷಿಸಿದ ರಾಹುಲ್‌ ದ್ರಾವಿಡ್‌ ದಂಪತಿ

Update: 2023-12-02 15:22 IST

ಮೈಸೂರು: ಮೈಸೂರಿನ ಮಾನಸಗಂಗೋತ್ರಿಯ ಗ್ಲೇಡ್ಸ್ ಮೈದಾನದ ಶ್ರೀಕಂಠದತ್ತ ನರಸಿಂಜರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಮತ್ತು ಉತ್ತರಾಖಂಡ ನಡುವಿನ ಕ್ರಿಕೆಟ್ ಪಂದ್ಯಾವಳಿಯನ್ನು ಖ್ಯಾತ ಕ್ರಿಕೆಟಿಗ ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಶುಕ್ರವಾರ ತಮ್ಮ ಪತ್ನಿ ಡಾ.ವಿಜೇತಾ ಅವರೊಂದಿಗೆ ಕಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತು ವೀಕ್ಷಿಸಿದರು.

ದ್ರಾವಿಡ್ ಪುತ್ರ ಸುಮೀತ್ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದು, ಅವನ ಆಟವನ್ನು ದಂಪತಿಗಳು ಕಣ್ತುಂಬಿಕೊಂಡರು. ವಿಶ್ವಕಪ್  ಫೈನಲ್ ತಲುಪಿದ್ದ ಭಾರತ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಎರಡನೇ ಅವದಿಗೂ ಮುಂದುವರೆದಿದ್ದಾರೆ. ತಮ್ಮ ಕೆಲಸಕ್ಕೆ ರಜೆ ಹಾಕಿ ಮಗನ ಕ್ರಿಕೆಟ್ ಆಟವನ್ನು ನೋಡಲು ಅವರು ಮೈಸೂರಿಗೆ ಆಗಮಿಸಿದ್ದರು.

ಯಾರ ಗೋಜು ಇಲ್ಲದೆ ತಮ್ಮ ಪತ್ನಿ ಡಾ.ವಿಜೇತ ಅವರೊಂದಿಗೆ ಸ್ಟೇಡಿಯಂನ ಕಲ್ಲು ಮೆಟ್ಟಿಲುಗಳ ಮೇಲೆ ಕುಳಿತು ಕ್ರಿಕೆಟ್ ವೀಕ್ಷಿಸಿ ಮಗನ ಆಟದ ಶೈಲಿ ಬಗ್ಗೆ ಪತ್ನಿಗೆ ವಿವರಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News