×
Ad

ಅಂಪೈರ್‌ ತೀರ್ಪಿಗೆ ಅಸಮಾಧಾನ: ಬ್ಯಾಟ್‌ನಲ್ಲಿ ಹೊಡೆದು ಹೆಲ್ಮೆಟ್‌ ಅನ್ನು ಪಾರ್ಕ್‌ನಿಂದ ಹೊರಗಟ್ಟಿದ ಕಾರ್ಲೋಸ್ ಬ್ರಾತ್ ವೇಟ್

Update: 2024-08-26 14:38 IST

PC : X 

ಜಾರ್ಜ್ ಟೌನ್: ವಿವಾದಾತ್ಮಕ ಔಟ್ ಗೆ ಆಕ್ರೋಶ ವ್ಯಕ್ತಪಡಿಸಿದ ವೆಸ್ಟ್ ಇಂಡೀಸ್ ಆಲ್ ರೌಂಡರ್ ಕಾರ್ಲೋಸ್ ಬ್ರಾತ್ ವೇಟ್, ಬ್ಯಾಟ್‌ನಲ್ಲಿ ಹೊಡೆದು ಹೆಲ್ಮೆಟ್‌ ಅನ್ನು ಪಾರ್ಕ್‌ನಿಂದ ಹೊರಗಟ್ಟಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ಮ್ಯಾಕ್ಸ್ 60 ಕೆರೆಬಿಯನ್ 2024 ಪಂದ್ಯಾವಳಿಯಲ್ಲಿ ಗ್ರ್ಯಾಂಡ್ ಕೇಮನ್ ಜಾಗ್ವಾರ್ಸ್ ತಂಡದ ಎದುರು ಬ್ರಾತ್ ವೇಟ್ ತಂಡವಾದ ನ್ಯೂಯಾರ್ಕ್ ಸ್ಟ್ರೈಕರ್ಸ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆಡುವಾಗ ನಡೆದಿದೆ.

ಜೊಶುವಾ ಲಿಟ್ಲ್ ಎಸೆದ ಬಾಲ್ ಸ್ಟಂಪ್ಸ್ ಹಿಂದೆ ಕ್ಯಾಚ್ ಆಗುವುದಕ್ಕೂ ಮುನ್ನ, ಆ ಬಾಲ್ ಬ್ರಾತ್ ವೇಟ್ ರ ತೋಳಿಗೆ ಬಡಿದಿತ್ತು. ಆ ಸಂದರ್ಭದಲ್ಲಿ ಬಾಲ್ ಮತ್ತು ಬ್ಯಾಟ್ ನಡುವೆ ಯಾವುದೇ ಸಂಪರ್ಕವಾದಂತೆ ಕಂಡು ಬಂದಿಲ್ಲ. ಆದರೆ, ಎದುರಾಳಿ ತಂಡದ ಆಟಗಾರರು ಕ್ಯಾಚ್ ಮನವಿ ಮಾಡಿದಾಗ, ಅದನ್ನು ಪುರಸ್ಕರಿಸಿದ ಅಂಪೈರ್ ಬ್ರಾತ್ ವೇಟ್ ಔಟ್ ಎಂದು ತೀರ್ಪು ನೀಡಿದ್ದಾರೆ.

ಪೆವಿಲಿಯನ್ ಗೆ ಮರಳುವಾಗ ಕುಪಿತ ಬ್ರಾತ್ ವೇಟ್, ಬೌಂಡರಿ ಗೆರೆಯ ಬಳಿ ಸಮೀಸುತ್ತಿದ್ದಂತೆಯೆ ತಮ್ಮ ಹೆಲ್ಮೆಟ್‌ ಅನ್ನು ಬ್ಯಾಟ್ ನಿಂದ ಪಾರ್ಕಿನಾಚೆ ಹೊಡೆದಿದ್ದಾರೆ.

ಆದರೂ, ಈ ಪಂದ್ಯದಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವು, ಗ್ರ್ಯಾಂಡ್ ಕೇಮನ್ ಜಾಗ್ವಾರ್ಸ್ ತಂಡವನ್ನು ಎಂಟು ರನ್ ಗಳಿಂದ ಮಣಿಸುವಲ್ಲಿ ಯಶಸ್ವಿಯಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News