×
Ad

ರಶ್ಯ, ಬೆಲಾರುಸ್ ಕುಸ್ತಿಪಟುಗಳ ಮೇಲಿನ ನಿರ್ಬಂಧ ತೆರವುಗೊಳಿಸಿದ UWW

Update: 2026-05-15 21:34 IST

Photo Credit : UWW

ಲೋಸಾನ್ (ಸ್ವಿಟ್ಸರ್‌ಲ್ಯಾಂಡ್): ಬೆಲಾರುಸ್ ಮತ್ತು ರಶ್ಯದ ಕುಸ್ತಿಪಟುಗಳು ಯಾವುದೇ ನಿರ್ಬಂಧಗಳಿಲ್ಲದೆ ಅಂತರ್‌ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ ಎಂದು ಕ್ರೀಡೆಯ ಜಾಗತಿಕ ಆಡಳಿತ ಮಂಡಳಿ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (UWW) ಶುಕ್ರವಾರ ತಿಳಿಸಿದೆ.

‘‘ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ, ಬೆಲಾರುಸ್ ಮತ್ತು ರಶ್ಯದ ಕುಸ್ತಿಪಟುಗಳು ಸೀನಿಯರ್ ವಿಭಾಗ ಸೇರಿದಂತೆ ಎಲ್ಲಾ ವಯೋಮಾನದ ವಿಭಾಗಗಳಲ್ಲಿ ತಮ್ಮ ರಾಷ್ಟ್ರಧ್ವಜದ ಅಡಿಯಲ್ಲಿ ಸ್ಪರ್ಧಿಸಲಿದ್ದಾರೆ. ಕ್ರೀಡಾಪಟುಗಳು ಮತ್ತು ಸಿಬ್ಬಂದಿಯ ಸಮವಸ್ತ್ರದ ಮೇಲೆ ಈಗ “RUS” ಮತ್ತು “BLR” ಎಂಬ ದೇಶ ಸೂಚಕ ಅಕ್ಷರಗಳನ್ನು ಬಳಸಬಹುದು. ಅಲ್ಲದೆ, ಯುಡಬ್ಲ್ಯುಡಬ್ಲ್ಯು ಕೂಟಗಳಲ್ಲಿ ಈ ದೇಶದ ಕುಸ್ತಿಪಟುಗಳು ಚಿನ್ನದ ಪದಕ ಗೆದ್ದರೆ ಅಥವಾ ತಂಡವು ಚಾಂಪಿಯನ್‌ಶಿಪ್ ಗೆದ್ದರೆ ಪದಕ ಪ್ರದಾನ ಸಮಾರಂಭದಲ್ಲಿ ಆಯಾ ದೇಶಗಳ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ’’ ಎಂದು ಯುಡಬ್ಲ್ಯುಡಬ್ಲ್ಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಜನವರಿಯಲ್ಲಿ, ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಶಿಫಾರಸಿನ ಮೇರೆಗೆ, ಈ ಎರಡು ದೇಶಗಳ ಅಂಡರ್-23 ವಯೋಮಿತಿಯವರೆಗಿನ ಯುವ ಕ್ರೀಡಾಪಟುಗಳಿಗೆ ತಮ್ಮ ರಾಷ್ಟ್ರಧ್ವಜಗಳ ಅಡಿಯಲ್ಲಿ ಸ್ಪರ್ಧಿಸಲು ಯುಡಬ್ಲ್ಯುಡಬ್ಲ್ಯು ಅನುಮತಿ ನೀಡಿತ್ತು.

ಉಕ್ರೇನ್ ಮೇಲೆ ರಶ್ಯ ಆಕ್ರಮಣ ಮಾಡಿದ ಹಿನ್ನೆಲೆಯಲ್ಲಿ ರಶ್ಯ ಮತ್ತು ಬೆಲಾರುಸ್ ದೇಶಗಳ ಕುಸ್ತಿಪಟುಗಳು ಜಾಗತಿಕವಾಗಿ ಸ್ಪರ್ಧಿಸದಂತೆ 2022ರ ಮಾರ್ಚ್‌ನಲ್ಲಿ ನಿಷೇಧ ಹೇರಲಾಗಿತ್ತು. ಉಕ್ರೇನ್ ಮೇಲಿನ ಆಕ್ರಮಣಕ್ಕೆ ರಶ್ಯಕ್ಕೆ ಬೆಲಾರುಸ್ ಸಹಕಾರ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News