×
Ad

"ನನ್ನ ಯೋಗ್ಯತೆ ಸಾಬೀತುಪಡಿಸಬೇಕು ಎಂದು ಬಯಸಿದರೆ...": 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಕುರಿತು ಕೊಹ್ಲಿ ಹೇಳಿದ್ದೇನು?

Update: 2026-05-15 21:46 IST

ವಿರಾಟ್ ಕೊಹ್ಲಿ | Photo Credit : PTI 

ಮುಂಬೈ: 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಹಸಿವು ನನಗಿನ್ನೂ ಇದೆ, ಆದರೆ ಭಾರತೀಯ ತಂಡದಲ್ಲಿ ನನ್ನ ಉಪಸ್ಥಿತಿಗೆ ಮೌಲ್ಯವಿದೆ ಎನಿಸಿದರೆ ಮಾತ್ರ ನಾನು ಕಣಕ್ಕಿಳಿಯುತ್ತೇನೆ ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ 37 ವರ್ಷದ ಕೊಹ್ಲಿ, ತಂಡದಲ್ಲಿ ಸ್ಥಾನ ಪಡೆಯುವ ಅರ್ಹತೆ ನನಗಿದೆ ಎನ್ನುವುದನ್ನು ಪದೇ ಪದೇ ಸಮರ್ಥಿಸಿಕೊಳ್ಳುವ ಆಸಕ್ತಿ ನನಗಿಲ್ಲ ಎಂದು ಹೇಳಿದರು.

‘‘ನಾನು ಯಾವಾಗಲೂ ಸಿದ್ಧನಾಗಿಯೇ ಇರುತ್ತೇನೆ. ಏಕೆಂದರೆ ಅದು ನನ್ನ ದೈನಂದಿನ ಜೀವನದ ಭಾಗ. ನಾನು ವ್ಯಾಯಾಮ ಮಾಡುತ್ತೇನೆ, ಮನೆಯಲ್ಲಿ ಉತ್ತಮ ಆಹಾರ ಸೇವಿಸುತ್ತೇನೆ. ನಾನು ಹೀಗೆ ಮಾಡುವುದು ಕೇವಲ ಕ್ರಿಕೆಟ್ ಆಡುವುದಕ್ಕಾಗಿ ಮಾತ್ರ ಅಲ್ಲ. ನಾನು ಆ ರೀತಿ ಬದುಕಲು ಇಷ್ಟಪಡುವುದಕ್ಕಾಗಿ ನಾನು ಹಾಗೆ ಮಾಡುತ್ತೇನೆ’’ ಎಂದು ಕೊಹ್ಲಿ ಹೇಳಿದರು.

‘‘ನನ್ನ ದೃಷ್ಟಿಕೋನ ತುಂಬಾ ಸ್ಪಷ್ಟವಾಗಿದೆ. ನಾನು ಭಾಗವಾಗಿರುವ ತಂಡಕ್ಕೆ ನನ್ನಿಂದ ಉಪಯೋಗ ಇದೆ ಎಂದು ನನಗೆ ಅನಿಸಿದರೆ ಮತ್ತು ನನ್ನಿಂದ ಉಪಯೋಗ ಇದೆ ಎಂದು ತಂಡಕ್ಕೂ ಅನಿಸಿದರೆ, ನಾನು ತಂಡದಲ್ಲಿ ಇರುತ್ತೇನೆ. ಒಂದು ವೇಳೆ ನನ್ನ ಯೋಗ್ಯತೆ ಅಥವಾ ಮೌಲ್ಯವನ್ನು ಸಾಬೀತುಪಡಿಸಬೇಕು ಎಂದು ಇತರರು ಬಯಸಿದರೆ, ನಾನು ಅಲ್ಲಿರುವುದಿಲ್ಲ’’ ಎಂದು ಅವರು ಹೇಳಿದ್ದಾರೆ.

2024ರಲ್ಲಿ ಅಂತರ್‌ರಾಷ್ಟ್ರೀಯ ಟಿ20 ಮತ್ತು 2025ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕೊಹ್ಲಿ, ಸದ್ಯ ಕೇವಲ ಏಕದಿನ ಮಾದರಿಯಲ್ಲಿ ಆಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News