×
Ad

ಬಿಹಾರ ರಣಜಿ ತಂಡದ ಉಪನಾಯಕನಾಗಿ 14 ವರ್ಷದ ವೈಭವ್ ಸೂರ್ಯವಂಶಿ ಆಯ್ಕೆ

Update: 2025-10-13 21:13 IST

 ವೈಭವ್ ಸೂರ್ಯವಂಶಿ | Photo Credit  : PTI 

ಪಾಟ್ನಾ, ಅ. 13: ಮುಂಬರುವ ರಣಜಿ ಟ್ರೋಫಿ ಋತುವಿನ ಮೊದಲ ಎರಡು ಪಂದ್ಯಗಳಿಗೆ ಬಿಹಾರ ತಂಡದ ಉಪನಾಯಕನಾಗಿ 14 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿಯನ್ನು ನೇಮಿಸಲಾಗಿದೆ.

ಸಾಕಿಬುಲ್ ಗನಿ ತಂಡದ ನಾಯಕನಾಗಿದ್ದಾರೆ. ಹಾಲಿ ರಣಜಿ ಟ್ರೋಫಿ ಋತು ಬುಧವಾರ ಆರಂಭಗೊಳ್ಳಲಿದೆ.

ಬಿಹಾರವು ಪಾಟ್ನಾದ ಮೊಯಿನುಲ್ ಹಕ್ ಸ್ಟೇಡಿಯಮ್‌ ನಲ್ಲಿ ಬುಧವಾರ ಆರಂಭಗೊಳ್ಳುವ ತನ್ನ ಪ್ಲೇಟ್ ಲೀಗ್‌ನ ಆರಂಭಿಕ ಪಂದ್ಯದಲ್ಲಿ ಅರುಣಾಚಲಪ್ರದೇಶವನ್ನು ಎದುರಿಸಲಿದೆ. ಬಿಹಾರ ಕ್ರಿಕೆಟ್ ಅಸೋಸಿಯೇಶನ್ ರವಿವಾರ ತಂಡವನ್ನು ಪ್ರಕಟಿಸಿದೆ.

ಕಳೆದ ರಣಜಿ ಋತುವಿನಲ್ಲಿ ಒಂದೇ ಒಂದು ಗೆಲುವನ್ನು ಪಡೆಯಲು ಬಿಹಾರ ವಿಫಲವಾದ ಬಳಿಕ ತಂಡಕ್ಕೆ ಹಿಂಭಡ್ತಿ ನೀಡಿ ಪ್ಲೇಟ್ ಲೀಗ್‌ಗೆ ಸೇರಿಸಲಾಗಿತ್ತು.

ಸೂರ್ಯವಂಶಿ 2023-24ರ ಋತುವಿನಲ್ಲಿ ತನ್ನ 12ನೇ ವರ್ಷದಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದಾರೆ. ಬಳಿಕ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೂ ಆಯ್ಕೆಯಾದರು. ಆ ಮೂಲಕ ಐಪಿಎಲ್‌ನಲ್ಲಿ ಆಡಿದ ಅತ್ಯಂತ ಕಿರಿಯ (13 ವರ್ಷ) ಆಟಗಾರನೆಂಬ ದಾಖಲೆಯನ್ನು ಸೃಷ್ಟಿಸಿದರು. ಅವರು ಕಳೆದ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಪರವಾಗಿ 35 ಎಸೆತಗಳಲ್ಲಿ ಶತಕವನ್ನು ಬಾರಿಸಿದರು. ಆ ಮೂಲಕ ಪುರುಷರ ಟಿ20 ಪಂದ್ಯವೊಂದರಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು. ಅದು ಐಪಿಎಲ್‌ನ ಎರಡನೇ ಅತ್ಯಂತ ವೇಗದ ಶತಕವಾಗಿದೆ.

ಸೂರ್ಯವಂಶಿ ಇಡೀ ಋತುವಿನಲ್ಲಿ ಬಿಹಾರಕ್ಕಾಗಿ ಆಡುವ ಸಾಧ್ಯತೆಯಿಲ್ಲ. ಯಾಕೆಂದರೆ ಮುಂದಿನ ವರ್ಷದ ಆದಿ ಭಾಗದಲ್ಲಿ ಜಿಂಬಾಬ್ವೆ ಮತ್ತು ನಮೀಬಿಯದಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್‌ನಲ್ಲಿ ಆಡುವ ಭಾರತದ ತಂಡಕ್ಕೆ ಆಯ್ಕೆಗೊಳ್ಳಲು ಅವರು ಸ್ಪರ್ಧೆಯಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News