×
Ad

ಹಿರಿಯ ನಟ ದೇಬು ಮುಖರ್ಜಿ ನಿಧನ

Update: 2025-03-14 22:26 IST

ಮುಂಬೈ: ನಿರ್ದೇಶಕ ಆಯನ್ ಮುಖರ್ಜಿ ಅವರ ತಂದೆ ಹಾಗೂ ಹಿರಿಯ ನಟ, ನಿರ್ದೇಶಕ ದೇಬ್ ಮುಖರ್ಜಿ (83) ದೀರ್ಘ ಕಾಲದ ಅನಾರೋಗ್ಯದ ಬಳಿಕ ಮುಂಬೈಯ ಉಪನಗರದಲ್ಲಿರುವ ತನ್ನ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾದರು.

1960 ಹಾಗೂ 1970ರ ಅವಧಿಯಲ್ಲಿ ದೇಬ್ ಮುಖರ್ಜಿ ಅವರು ‘‘ತು ಹಿ ಮೇರಿ ಝಿಂದಗಿ’’, ‘‘ಅಭಿನೇತ್ರಿ’’, ‘‘ದೋ ಆಂಖೆ’’, ‘‘ಬಾತೋ ಬಾತೋ ಮೆ’’, ‘‘ಜೋ ಜೀತಾ ವಹೀ ಸಿಕಂದರ್’’, ‘‘ಕಿಂಗ್ ಅಂಕಲ್’’ ಹಾಗೂ ‘‘ಕಾಮಿನೆ’’ಯಂತಹ ಚಿತ್ರಗಳಲ್ಲಿ ಫೋಷಕ ಪಾತ್ರಗಳಲ್ಲಿ ನಟಿಸಿದ್ದರು.

1983ರಲ್ಲಿ ಮಿಥುನ್ ಚಕ್ರವರ್ತಿ, ಕಾಜಲ್ ಕಿರಣ್ ಹಾಗೂ ಯೋಗಿತಾ ಬಾಲಿ ನಟಿಸಿದ ‘‘ಕರಾಟೆ’’ ಚಿತ್ರವನ್ನು ಅವರು ನಿರ್ಮಿಸಿ, ನಿರ್ದೇಶಿಸಿದ್ದರು.

ಅವರ ಅಂತ್ಯಕ್ರಿಯೆಯನ್ನು ಮುಂಬೈಯ ಉಪನಗರದ ಜುಹುನಲ್ಲಿರುವ ಪವನ್ ಹಂಸ್ ಚಿತಾಗಾರದಲ್ಲಿ ನೆರವೇರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News