×
Ad

ಪಾಕ್ ಆಟಗಾರರು ಲಗೇಜನ್ನು ಕಂಟೈನರ್‌ಗೆ ತುಂಬಿಸುತ್ತಿದ್ದ ವೀಡಿಯೊ ವೈರಲ್; ಶಾಹೀನ್ ಅಫ್ರಿದಿ ಸ್ಪಷ್ಟನೆ

Update: 2023-12-05 21:27 IST

X/@mirzaiqbal80

ಹೊಸದಿಲ್ಲಿ: ಸಿಡ್ನಿ ವಿಮಾನ ನಿಲ್ದಾಣದ ಹೊರಗೆ ಕಂಟೈನರ್ ಟ್ರಕ್‌ವೊಂದಕ್ಕೆ ಪಾಕಿಸ್ತಾನದ ಆಟಗಾರರು ತಮ್ಮ ಲಗೇಜನ್ನು ತುಂಬಿಸುತ್ತಿರುವ ವೀಡಿಯೊ ಇತ್ತೀಚೆಗೆ ವೈರಲ್ ಆಗಿದ್ದು, ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಅಫ್ರಿದಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಪರಿಸ್ಥಿತಿಯ ಕುರಿತು ಸ್ಪಷ್ಟನೆ ನೀಡಿದ ಅಫ್ರಿದಿ, ನಮಗೆ ಮುಂದಿನ ವಿಮಾನ ಏರಲು ಕೇವಲ 30 ನಿಮಿಷಗಳು ಬಾಕಿ ಇತ್ತು. ಕೇವಲ ಇಬ್ಬರು ಲಗೇಜ್ ಅನ್ನು ಲೋಡ್ ಮಾಡುತ್ತಿದ್ದರಿಂದ ನಾವು ಅವರಿಗೆ ಸಹಾಯ ಮಾಡಿದೆವು. ನಾವು ಸಮಯ ಉಳಿಸಲು ಬಯಸಿದ್ದೆವು. ನಾವು ಈ ತಂಡವನ್ನು ಕುಟುಂಬವೆಂದು ಕರೆಯುತ್ತೇವೆ. ಕುಟುಂಬದ ಸದಸ್ಯರಾಗಿ ಅವರಿಗೆ ಸಹಾಯ ಮಾಡಿದೆವು ಎಂದು ಮತ್ತೊಂದು ವೀಡಿಯೊದಲ್ಲಿ ವಿವರಿಸಿದರು.

ಪಾಕಿಸ್ತಾನ ತಂಡ ಆಸ್ಟ್ರೇಲಿಯ ಪ್ರವಾಸದ ವೇಳೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಸಿಡ್ನಿಗೆ ಆಗಮಿಸಿದಾಗ ಈ ಘಟನೆ ನಡೆದಿದೆ. ತಂಡದ ಒಡನಾಟ ಹಾಗೂ ಸಹಕಾರದ ಕಾರ್ಯವು ತಂಡದೊಳಗಿನ ಏಕತೆಯನ್ನು ಮತ್ತಷ್ಟು ಬಲಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News