×
Ad

Vijay Hazare Trophy | 75 ಕ್ಕೆ 157 ರನ್; ಸರ್ಫರಾಝ್‌ ಖಾನ್ ಸ್ಫೋಟಕ ಶತಕ

Update: 2025-12-31 16:30 IST

ಸರ್ಫರಾಝ್‌ ಖಾನ್ | Photo Credit : NDTV  

ಜೈಪುರ: ದೇಶೀಯ ಕ್ರಿಕೆಟ್‌ ನಲ್ಲಿ ಸತತವಾಗಿ ಮಿಂಚುತ್ತಿರುವ ಮುಂಬೈನ ಆಟಗಾರ ಸರ್ಫರಾಝ್‌ ಖಾನ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆದಿದ್ದಾರೆ.

ಬುಧವಾರ ಗೋವಾ ವಿರುದ್ಧ ನಡೆದ ಪಂದ್ಯದಲ್ಲಿ ಸರ್ಫರಾಝ್‌ ಕೇವಲ 75 ಎಸೆತಗಳಲ್ಲಿ 157 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ ನಲ್ಲಿ 14 ಸಿಕ್ಸರ್‌ ಗಳು ಹಾಗೂ 9 ಬೌಂಡರಿಗಳು ಸೇರಿದ್ದು, ಮುಂಬೈ ತಂಡ ದೊಡ್ಡ ಮೊತ್ತದತ್ತ ಸಾಗಲು ನೆರವಾಯಿತು. ಜ.11ರಿಂದ ಆರಂಭಗೊಳ್ಳಲಿರುವ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಶೀಘ್ರದಲ್ಲೇ ತಂಡವನ್ನು ಪ್ರಕಟಿಸಬೇಕಿರುವ ಹಿನ್ನೆಲೆಯಲ್ಲಿ, ಈ ಶತಕಕ್ಕೆ ವಿಶೇಷ ಮಹತ್ವ ಲಭಿಸಿದೆ.

ಗೋವಾ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿತು. ಆರಂಭಿಕವಾಗಿ ಅಂಗ್ಕ್ರಿಶ್ ರಘುವಂಶಿ ಔಟಾದರೂ, ಯಶಸ್ವಿ ಜೈಸ್ವಾಲ್ ಮತ್ತು ಮುಶೀರ್ ಖಾನ್ ಜವಾಬ್ದಾರಿಯುತ ಆಟದ ಮೂಲಕ ತಂಡಕ್ಕೆ ರಕ್ಷಣಾತ್ಮಕ ಆಟವಾಡಿದರು. ಬಳಿಕ ಕ್ರೀಸ್‌ ಗೆ ಬಂದ ಸರ್ಫರಾಝ್‌ ಎದುರಾಳಿ ಬೌಲರ್‌ ಗಳ ಮೇಲೆ ದಿಟ್ಟ ದಾಳಿ ನಡೆಸಿ ಪಂದ್ಯದ ದಿಕ್ಕನ್ನೇ ಬದಲಿಸಿದರು.

ಈ ಹಿಂದಿನ ಪಂದ್ಯದಲ್ಲಿ ಮುಂಬೈ ತಂಡ ಛತ್ತೀಸ್‌ಗಢ ವಿರುದ್ಧ ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಜೈಪುರ ವಿದ್ಯಾಲಯ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಛತ್ತೀಸ್‌ ಗಢ 38.1 ಓವರ್‌ ಗಳಲ್ಲಿ 142 ರನ್‌ಗಳಿಗೆ ಆಲೌಟ್ ಆಗಿತ್ತು. ಶಾರ್ದೂಲ್ ಠಾಕೂರ್ ಅವರ ಆರಂಭಿಕ ಬೌಲಿಂಗ್‌ ಬಳಿಕ ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ 5 ವಿಕೆಟ್ ಪಡೆದು ಎದುರಾಳಿ ಬ್ಯಾಟಿಂಗ್‌ನ್ನು ಸಂಪೂರ್ಣವಾಗಿ ಪೆವಿಲಿಯನ್ ಪೆರೇಡ್ ಮಾಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News