ವಿಜಯ್ ಹಝಾರೆ ಟ್ರೋಫಿ| ಒಂದೇ ವರ್ಷ ಮೂರನೇ ಗರಿಷ್ಠ ರನ್‌ಗಳಿಸಿದ ಅಮನ್ ಮೊಖಾಡೆ
ಅಮನ್ ಮೊಖಾಡೆ|Photo: x\@ani_digital
ಬೆಂಗಳೂರು, ಜ.18: ವಿದರ್ಭ ಹಾಗೂ ಸೌರಾಷ್ಟ್ರ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದ ವೇಳೆ ಅಮನ್ ಮೊಖಾಡೆ ಅವರು ಒಂದೇ ಆವೃತ್ತಿಯ ವಿಜಯ್ ಹಝಾರೆ ಟ್ರೋಫಿಯಲ್ಲಿ ಮೂರನೇ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದರು.
ಎನ್.ಜಗದೀಶನ್ ಅವರು 2022-23ರ ಆವೃತ್ತಿಯ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ 830 ರನ್ ಹಾಗೂ 2020-21ರಲ್ಲಿ ಪೃಥ್ವಿ ಶಾ ಅವರು 827 ರನ್ ಕಲೆ ಹಾಕಿದ್ದರು.
ಅಮನ್ ಮೊಖಾಡೆ ಅವರು ಪ್ರಸಕ್ತ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ 10 ಇನಿಂಗ್ಸ್‌ಗಳಿಂದ 814 ರನ್ ಕಲೆ ಹಾಕಿದ್ದಾರೆ. ರಾಜ್‌ಕೋಟ್‌ನಲ್ಲಿ ಬರೋಡಾ ತಂಡದ ವಿರುದ್ಧ ಗರಿಷ್ಠ 150 ರನ್ ಗಳಿಸಿದ್ದರು.
ವಿಜಯ್ ಹಝಾರೆ ಟ್ರೋಫಿ ಟೂರ್ನಿಯೊಂದರಲ್ಲಿ ಐದು ಶತಕಗಳನ್ನು ಗಳಿಸಿರುವ ಮೊಖಾಡೆ ಅವರು ಜಗದೀಶನ್ ಹಾಗೂ ಕರುಣ್ ನಾಯರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಕರುಣ್ ನಾಯರ್ ಕಳೆದ ವರ್ಷ ವಿದರ್ಭದ ಪರ ಈ ಸಾಧನೆ ಮಾಡಿದ್ದರು.
ಆರಂಭಿಕ ಬ್ಯಾಟರ್ ಅಮನ್ ಮೊಖಾಡೆ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಅಂಕುರ್ ಪನ್ವರ್‌ಗೆ ವಿಕೆಟ್ ಒಪ್ಪಿಸುವ ಮೊದಲು ನಾಲ್ಕು ಬೌಂಡರಿಗಳ ಸಹಿತ 45 ಎಸೆತಗಳಲ್ಲಿ 33 ರನ್ ಗಳಿಸಿದ್ದಾರೆ.