×
Ad

ನಮ್ಮನ್ನು ರಸ್ತೆಯಲ್ಲಿ ಎಳೆದಾಡಿದಾಗ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ನಮ್ಮ ಬೆಂಬಲಕ್ಕೆ ನಿಂತಿದ್ದವು: ವಿನೇಶ್ ಫೋಗಟ್

Update: 2024-09-06 16:27 IST

ವಿನೇಶ್ ಫೋಗಟ್ | PC : ANI 

ಹೊಸದಿಲ್ಲಿ: ನಮ್ಮನ್ನು ರಸ್ತೆಯಲ್ಲಿ ಎಳೆದಾಡಿದಾಗ ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮೊಂದಿಗೆ ನಿಂತಿದ್ದವು ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಬಳಿಕ ವಿನೇಶ್ ಫೋಗಟ್ ಹೇಳಿದ್ದಾರೆ.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಬಳಿಕ ಮಾತನಾಡಿದ ವಿನೀಶ್ ಪೋಗಟ್, ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದವನ್ನು ಸಲ್ಲಿಸುತ್ತೇನೆ. ಕುಸ್ತಿಪಟುವಾಗಿ ನನ್ನ ಪ್ರಯಾಣವು ನನ್ನ ಅನುಭವವನ್ನು ಹೆಚ್ಚಿಸಿದೆ. ನಾನು ಪ್ರತಿ ಅಸಹಾಯಕ ಮಹಿಳೆಯೊಂದಿಗೆ ನಿಲ್ಲುತ್ತೇನೆ. ಬಿಜೆಪಿ ನಮ್ಮೊಂದಿಗೆ ನಿಂತಿಲ್ಲ, ಬಿಜೆಪಿ ನಮ್ಮನ್ನು ಟೀಕಿಸಿದೆ, ನಾವು ರಾಜಕೀಯ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಬಜರಂಗ್ ಪುನಿಯಾ, ಒಲಿಂಪಿಕ್ಸ್ ಪಯಣದಲ್ಲಿ ಎಲ್ಲರೂ ವಿನೇಶ್ ಅವರನ್ನು ಬೆಂಬಲಿಸಿದ್ದಾರೆ. ಆದರೆ ಕೆಲವು ಐಟಿ ಸೆಲ್‌ಗಳು ಆಕೆಯನ್ನು ಅನರ್ಹಗೊಳಿಸಿದಾಗ ಸಂಭ್ರಮಿಸಿದ್ದವು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸೇರ್ಪಡೆಯಾಗಿ ದೇಶದ ಮಹಿಳೆಯರಿಗಾಗಿ, ಪಕ್ಷಕ್ಕಾಗಿ ಮತ್ತು ತಳಮಟ್ಟದ ಜನರಿಗೆ ಸಹಾಯ ಮಾಡಲು ಶ್ರಮಿಸುತ್ತೇನೆ ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ.

ಈ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಪವನ್ ಕೈರಾ, ಹರ್ಯಾಣ ಕಾಂಗ್ರೆಸ್ ಮುಖ್ಯಸ ಉದಯ್ ಬಾನ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News