×
Ad

ಸರಿಯಾಗಿ ನಡೆಯಲು ಪರದಾಡಿದ ವಿನೋದ್ ಕಾಂಬ್ಳಿ!

Update: 2024-08-06 21:40 IST

ವಿನೋದ್ ಕಾಂಬ್ಳಿ | PC : NDTV 

ಮುಂಬೈ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ತುಂಬಾ ಸಮಯದಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಇತ್ತೀಚಿನ ವೀಡಿಯೊವೊಂದನ್ನು ನೋಡಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಬೆಚ್ಚಿಬಿದ್ದಿದ್ದಾರೆ.

ಕಾಂಬ್ಳಿ ಸರಿಯಾಗಿ ನಡೆಯಲು ಪರದಾಡುತ್ತಿರುವುದನ್ನು ಹಾಗೂ ಅಲ್ಲಿದ್ದ ಜನರು ಅವರಿಗೆ ಆಸರೆ ನೀಡಿ ರಸ್ತೆಯಿಂದ ಸುರಕ್ಷಿತವಾಗಿ ಕರೆದುಕೊಂಡು ಹೋಗುವುದನ್ನು ವೀಡಿಯೊ ತೋರಿಸುತ್ತದೆ. ಅವರು ಅನ್ಯಮನಸ್ಕರಾಗಿರುವಂತೆ ಕಂಡು ಬಂದಿದ್ದು, ಸಮತೋಲನ ಹೊಂದಲು ಪರದಾಡುತ್ತಿರುವುದು ಕಂಡು ಬಂದಿದೆ.

ಅವರು ಕುಡಿದ ಮತ್ತಿನಲ್ಲಿದ್ದಾರೆ ಎಂದು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದರೆ, ಅವರು ಸ್ವಲ್ಪ ಸಮಯದಿಂದ ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಇನ್ನು ಕೆಲವರು ಬರೆದಿದ್ದಾರೆ. ಅವರ ಹದಗೆಡುತ್ತಿರುವ ಆರೋಗ್ಯದಿಂದಾಗಿ ಅವರಿಗೆ ಸರಿಯಾಗಿ ಚಲಿಸಲು ಆಗುತ್ತಿಲ್ಲ ಎಂದಿದ್ದಾರೆ.

ವಿನೋದ್ ಕಾಂಬ್ಳಿ ಭಾರತದ ಪರವಾಗಿ 17 ಟೆಸ್ಟ್ ಪಂದ್ಯಗಳು ಮತ್ತು 100ಕ್ಕೂ ಅಧಿಕ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸುಮಾರು 10,000 ರನ್ಗಳನ್ನು ಗಳಿಸಿದ್ದಾರೆ. ಅವರ ಶ್ರೇಷ್ಠ ಗಳಿಕೆ 262 ರನ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News