ಆರ್ಯವೀರ್ ಸೆಹ್ವಾಗ್ | Photo Credit : Aaryavir Sehwag \ Instagram

ಹೊಸದಿಲ್ಲಿ: ವಿನೂ ಮಂಕಡ್ ಟ್ರೋಫಿಗಾಗಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ದಿಲ್ಲಿ ಅಂಡರ್-19 ತಂಡದ ಪರವಾಗಿ ಚಂಡಿಗಡ ಅಂಡರ್-19 ತಂಡದ ವಿರುದ್ಧ ಆರ್ಯವೀರ್ ಸೆಹ್ವಾಗ್ 143 ಎಸೆತಗಳಲ್ಲಿ 173 ರನ್ ಕಲೆ ಹಾಕಿದರು.

ವಿಜಯನಗರಂನ ಪಿ.ವಿ.ಜಿ. ರಾಜು ಎಸಿಎ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ದಿಲ್ಲಿ ಅಂಡರ್-19 ತಂಡವನ್ನು ನಾಯಕನಾಗಿ ಮುನ್ನಡೆಸಿದ ಸೆಹ್ವಾಗ್ ತನ್ನ 143 ಎಸೆತಗಳ ಇನಿಂಗ್ಸ್‌ನಲ್ಲಿ 19 ಬೌಂಡರಿ ಹಾಗೂ ಎಂಟು ಸಿಕ್ಸರ್‌ಗಳನ್ನು ಸಿಡಿಸಿದರು. ಇದರೊಂದಿಗೆ ದಿಲ್ಲಿ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 289 ರನ್ ಗಳಿಸುವಲ್ಲಿ ನೆರವಾದರು.

ಭಾರತದ ಹಿರಿಯ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ರ ಪುತ್ರ ಆರ್ಯವೀರ್ ಇತ್ತೀಚೆಗೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ಆಸ್ಟ್ರೇಲಿಯ ಎ ತಂಡದ ವಿರುದ್ದ ಆಡಿದ್ದ ಭಾರತ ಎ ತಂಡದ ಶಿಬಿರದ ಭಾಗವಾಗಿದ್ದರು.

ಸೆಹ್ವಾಗ್ 104ರ ಸ್ಟ್ರೈಕ್‌ರೇಟ್‌ನಲ್ಲಿ ಮೂರು ಇನಿಂಗ್ಸ್‌ಗಳಲ್ಲಿ ಒಟ್ಟು 109 ರನ್ ಕಲೆ ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor