×
Ad

ODIನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ವಿರಾಟ್ ಕೊಹ್ಲಿ ಚಿತ್ತ

Update: 2025-12-05 21:16 IST

ವಿರಾಟ್ ಕೊಹ್ಲಿ | Photo Credit : PTI 

ವಿಶಾಖಪಟ್ಟಣ, ಡಿ.5: ಎರಡೂ ಪಂದ್ಯಗಳಲ್ಲಿ ಶತಕಗಳನ್ನು ಸಿಡಿಸಿದ್ದ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ್ದಾರೆ. ಶನಿವಾರ ನಡೆಯಲಿರುವ ಮೂರನೇ ಪಂದ್ಯದಲ್ಲಿ ಇನ್ನಷ್ಟು ದಾಖಲೆಗಳನ್ನು ನಿರ್ಮಿಸುವ ವಿಶ್ವಾಸದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ ನಲ್ಲಿ ಸತತ ಮೂರನೇ ಬಾರಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಳ್ಳುವ ಅಪೂರ್ವ ಅವಕಾಶ ಕೊಹ್ಲಿಗೆ ಒದಗಿಬಂದಿದೆ. ಇದೀಗ ಕೊಹ್ಲಿ ಹಾಗೂ ರೋಹಿತ್ ಅವರು ತಲಾ ಒಂದು ಬಾರಿ ಸತತ ಶತಕಗಳನ್ನು ಸಿಡಿಸಿದ್ದಾರೆ.ಕೊಹ್ಲಿ ತನ್ನ ವೃತ್ತಿಜೀವನದಲ್ಲಿ 11 ಬಾರಿ ಸತತ ಶತಕಗಳನ್ನು ಗಳಿಸಿದ್ದಾರೆ.

ಕೊಹ್ಲಿ ಅವರು ‘ಹ್ಯಾಟ್ರಿಕ್’ ಶತಕ ಗಳಿಸುವಲ್ಲಿ ಶಕ್ತರಾದರೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸತತ ನಾಲ್ಕು ಏಕದಿನ ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಸಕ್ತ ಸರಣಿಗಿಂತ ಮೊದಲು 2023ರ ಕ್ರಿಕೆಟ್ ವಿಶ್ವಕಪ್‌ ನ ವೇಳೆ ದಕ್ಷಿಣ ಆಫ್ರಿಕಾದ ವಿರುದ್ಧ ಕೊಹ್ಲಿ ಶತಕ ಗಳಿಸಿದ್ದರು.

ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್‌ ನಲ್ಲಿ ಹೆಚ್ಚು ಬಾರಿ 100 ರನ್ ಜೊತೆಯಾಟ ನಡೆಸಿದ ಜೋಡಿಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಜೋಡಿ ಕುಮಾರ ಸಂಗಕ್ಕರ ಹಾಗೂ ಟಿ.ಎಂ. ದಿಲ್ಶನ್ 20 ಬಾರಿ 100 ರನ್ ಜೊತೆಯಾಟ ನಡೆಸಿದ್ದರು. ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗುಲಿ 26ನೇ ಬಾರಿ ಶತಕದ ಜೊತೆಯಾಟ ನಡೆಸಿ ದಾಖಲೆ ನಿರ್ಮಿಸಿದ್ದಾರೆ.

ರೋಹಿತ್ ಶರ್ಮಾಗೆ ದಕ್ಷಿಣ ಆಫ್ರಿಕಾದ ಲೆಜೆಂಡ್ ಜಾಕಸ್ ಕಾಲಿಸ್ ದಾಖಲೆ ಮುರಿದು ಏಕದಿನ ಕ್ರಿಕೆಟ್‌ ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಲು 120 ರನ್‌ಗಳ ಅಗತ್ಯವಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News