ದಿಲ್ಲಿ ಪರ ಮೂರನೇ ಪಂದ್ಯವನ್ನಾಡಲು ವಿರಾಟ್ ಕೊಹ್ಲಿ ಸಜ್ಜು
ವಿರಾಟ್ ಕೊಹ್ಲಿ | Photo Credit : PTI
ಹೊಸದಿಲ್ಲಿ, ಡಿ.29: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬೆಂಗಳೂರಿನ ಬಿಸಿಸಿಐ ಮೈದಾನದಲ್ಲಿ ಜನವರಿ 6ರಂದು ನಡೆಯಲಿರುವ ರೈಲ್ವೇಸ್ ತಂಡ ವಿರುದ್ಧದ ವಿಜಯ್ ಹಝಾರೆ ಟ್ರೋಫಿ ಪಂದ್ಯದಲ್ಲಿ ದಿಲ್ಲಿ ತಂಡದ ಪರ ಆಡಲಿದ್ದಾರೆ ಎಂದು ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಪಿಟಿಐಗೆ ಸೋಮವಾರ ತಿಳಿಸಿದ್ದಾರೆ.
ಕೇಂದ್ರೀಯ ಗುತ್ತಿಗೆ ಪಡೆದಿರುವ ಆಟಗಾರರು ಕನಿಷ್ಠ ಎರಡು ದೇಶಿ ಪಂದ್ಯಗಳನ್ನು ಆಡಲೇಬೇಕೆಂದು ಬಿಸಿಸಿಐ ಕಡ್ಡಾಯಪಡಿಸಿದೆ. ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಸರಣಿಗೆ ತಯಾರಿ ನಡೆಸಲು ಕೊಹ್ಲಿ ಮೂರನೇ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.
‘‘ಸದ್ಯಟೂರ್ನಿಯಲ್ಲಿ ಕೊಹ್ಲಿ ಆಡುತ್ತಿದ್ದಾರೆ. ಮೂರು ಪಂದ್ಯಗಳಿಗೆ ಲಭ್ಯ ಇರುವುದಾಗಿ ಖಚಿತಪಡಿಸಿದ್ದಾರೆ’’ ಎಂದು ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಅಧ್ಯಕ್ಷ ರೋಹನ್ ಜೇಟ್ಲಿ ಪಿಟಿಐಗೆ ತಿಳಿಸಿದ್ದಾರೆ.
ದಿಲ್ಲಿ ಪರ ಆಡಿರುವ ಮೊದಲೆರಡು ಪಂದ್ಯಗಳಲ್ಲಿ ಕೊಹ್ಲಿ ಕ್ರಮವಾಗಿ 131 ಹಾಗೂ 77 ರನ್ ಗಳಿಸಿ ಮಿಂಚಿದ್ದಾರೆ.
ತನ್ನ 330ನೇ ಇನಿಂಗ್ಸ್‌ನಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16,000 ರನ್ ಪೂರೈಸಿರುವ ಕೊಹ್ಲಿ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದಿದ್ದಾರೆ.