×
Ad

ಐಪಿಎಲ್‌ನಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ!

Update: 2025-05-04 20:48 IST

ವಿರಾಟ್ ಕೊಹ್ಲಿ | PC : PTI 

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತನ್ನ ಸ್ಥಿರ ಪ್ರದರ್ಶನವನ್ನು ಮುಂದುವರಿಸಿರುವ ವಿರಾಟ್ ಕೊಹ್ಲಿ ಪಂದ್ಯಾವಳಿಯ ಇತಿಹಾಸದಲ್ಲಿ 8 ವಿವಿಧ ಋತುಗಳಲ್ಲಿ 500 ಹಾಗೂ ಅದಕ್ಕಿಂತ ಹೆಚ್ಚು ರನ್ ಕಲೆ ಹಾಕಿರುವ ಮೊದಲ ಆಟಗಾರನೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರವಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 33 ಎಸೆತಗಳಲ್ಲಿ 62 ರನ್ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ಸ್ಟಾರ್ ಬ್ಯಾಟರ್ ಈ ಮೈಲಿಗಲ್ಲು ತಲುಪಿದರು. ಇದೇ ವೇಳೆ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡರು.

63.13ರ ಸರಾಸರಿಯಲ್ಲಿ, 143.46ರ ಸ್ಟ್ರೈಕ್ರೇಟ್ನಲ್ಲಿ 11 ಇನಿಂಗ್ಸ್ಗಳಲ್ಲಿ 505 ರನ್ ಗಳಿಸಿರುವ ಕೊಹ್ಲಿ ಅವರು ಈ ವರ್ಷದ ಐಪಿಎಲ್ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಸಿಎಸ್ಕೆ ವಿರುದ್ಧ 62 ರನ್ ಗಳಿಸಿ ಈ ವರ್ಷ ತನ್ನ 7ನೇ ಅರ್ಧಶತಕ ಗಳಿಸಿ ಶ್ರೇಷ್ಠ ಫಾರ್ಮ್ ಮುಂದುವರಿಸಿದರು. ಕೊಹ್ಲಿ ಪ್ರದರ್ಶನದ ನೆರವಿನಿಂದ ಆರ್ಸಿಬಿ ತಂಡ ದೊಡ್ಡ ಮೊತ್ತದ ಹಣಾಹಣಿಯಲ್ಲಿ 2 ರನ್ನಿಂದ ರೋಚಕ ಜಯ ಸಾಧಿಸಿದೆ. ಸಿಎಸ್ಕೆ ತಂಡವನ್ನು 5 ವಿಕೆಟ್ಗೆ 211 ರನ್ಗೆ ನಿಯಂತ್ರಿಸಿರುವ ಆರ್ಸಿಬಿ 213 ರನ್ ಗಳಿಸಿದರೂ ಜಯ ಸಾಧಿಸಲು ಶಕ್ತವಾಯಿತು.

ಈ ಹಿಂದೆ 7 ಬಾರಿ 500 ಪ್ಲಸ್ ಸ್ಕೋರ್ ಗಳಿಸಿ ಡೇವಿಡ್ ವಾರ್ನರ್ ದಾಖಲೆಯನ್ನು ಸರಿಗಟ್ಟಿದ್ದ ಕೊಹ್ಲಿ ಇದೀಗ 8ನೇ ಬಾರಿ ಈ ಸಾಧನೆ ಮಾಡಿದ ಏಕೈಕ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಕೊಹ್ಲಿ 2011ರಲ್ಲಿ 557 ರನ್ ಗಳಿಸಿ ಈ ಸಾಧನೆಗೆ ನಾಂದಿ ಹಾಡಿದರು. ಆ ನಂತರ 2013(634 ರನ್), 2015(505ರನ್) ಹಾಗೂ 2016ರ ಋತುವಿನಲ್ಲಿ ದಾಖಲೆಯ 973 ರನ್ ಗಳಿಸಿದರು. ಇದರಲ್ಲಿ 4 ಶತಕಗಳಿವೆ. 2018ರಲ್ಲಿ ಇದೇ ಸಾಧನೆಯನ್ನು ಪುನರಾವರ್ತಿಸಿದ ಕೊಹ್ಲಿ 2023(639ರನ್)ಹಾಗೂ 2024(741ರನ್)ಸತತ ಋತುಗಳಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡರು. ಈ ವರ್ಷ ಮತ್ತೊಮ್ಮೆ ಈ ಮೈಲಿಗಲ್ಲು ತಲುಪಿದ್ದಾರೆ. ಐಪಿಎಲ್ ನಲ್ಲಿ 500 ಪ್ಲಸ್ ರನ್ ಗಳಿಸಿದವರ ಸಾರ್ವಕಾಲಿಕ ಪಟ್ಟಿಯಲ್ಲಿ ಕೆ.ಎಲ್.ರಾಹುಲ್(6ಬಾರಿ)ಹಾಗೂ ಶಿಖರ್ ಧವನ್(5ಬಾರಿ) ಆ ನಂತರದ ಸ್ಥಾನದಲ್ಲಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಗರಿಷ್ಠ 500 ಪ್ಲಸ್ ರನ್ ಗಳಿಸಿದ ಆಟಗಾರರು

8-ವಿರಾಟ್ ಕೊಹ್ಲಿ

7-ಡೇವಿಡ್ ವಾರ್ನರ್

6-ಕೆ.ಎಲ್.ರಾಹುಲ್

5-ಶಿಖರ್ ಧವನ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News