×
Ad

ಚೆಂಡೆತ್ತಲು ವೇದಿಕೆಯ ಕೆಳಗೆ ನುಗ್ಗಿದ ವಿರಾಟ್ ಕೊಹ್ಲಿ

Update: 2024-06-23 12:18 IST

PC: x.com/mufaddal_vohra

ನಾರ್ಥ್ ಸೌಂಡ್ : ಶನಿವಾರ ನಡೆದ ಟಿ20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ತಂಡವು ಭರ್ಜರಿ ಜಯ ಗಳಿಸಿದೆ. ಈ ಪಂದ್ಯದ ನಡುವೆ ಭಾರತ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ವೇದಿಕೆಯ ಕೆಳಗೆ ನುಗ್ಗಿದ ಸ್ವಾರಸ್ಯಕರ ಘಟನೆಯೊಂದು ನಡೆದಿದೆ.

ಇನಿಂಗ್ಸ್ ನ 17ನೇ ಓವರ್ ನಲ್ಲಿ ಅರ್ಷದೀಪ್ ಸಿಂಗ್ ಎಸೆತದಲ್ಲಿ ಬಾಂಗ್ಲಾದೇಶ ತಂಡದ ರಿಶಾದ್ ಹುಸೈನ್ ಸಿಕ್ಸರ್ ಬಾರಿಸಿದ್ದರು. ಈ ವೇಳೆ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಬೌಂಡರಿ ದಾಟಿದ್ದ ಚೆಂದು ತರಲು ಓಡಿದರು. ಆದರೆ ಚೆಂಡು ಪಟಾಕಿ ಸಿಡಿಸುವ ವೇದಿಕೆಯ ಕೆಳಗೆ ನುಗ್ಗಿತ್ತು. ಚೆಂಡು ತೆಗೆಯಲು ವಿರಾಟ್ ಕೊಹ್ಲಿ ಮಕ್ಕಳಂತೆ ವೇದಿಕೆ ಕೆಳಗೆ ನುಗ್ಗಿದರು.

ಚೆಂಡು ತೆಗೆಯಲು ವಿರಾಟ್ ಕೊಹ್ಲಿ ವೇದಿಕೆಯ ಕೆಳಗೆ ನುಗ್ಗಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವಿರಾಟ್ ಕೊಹ್ಲಿಯ ಈ ಸರಳತೆಯನ್ನು ಅನೇಕರು ಮೆಚ್ಚಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News