ಎಬಿಡಿ, ಗೇಲ್ ಬಳಿ ʼಈ ಸಲ ಕಪ್ ನಮ್ದೇʼ ಎಂದು ಹೇಳಿಸಿದ ವಿರಾಟ್ ಕೊಹ್ಲಿ
Photo: x/@StarSportsIndia
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ವೇಳೆ ವಿರಾಟ್ ಕೊಹ್ಲಿ ಅವರು, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಅವರೊಡನೆ ʼಈ ಸಲ ಕಪ್ ನಮ್ದುʼ ಎಂದು ಹೇಳಿಸಿದ್ದು ಆರ್ ಸಿ ಬಿ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿತು.
18 ವರ್ಷಗಳ ಬಳಿಕ ಐಪಿಎಲ್ ಪ್ರಶಸ್ತಿಗೆ ಚಾತಕ ಪಕ್ಷಿಯಂತೆ ಕಾದಿದ್ದ ರೋಯಲ್ ಚಾಲೆಂಜರ್ಸ್
ಬೆಂಗಳೂರು ತಂಡಕ್ಕೆ ಯಶಸ್ಸು ಲಭಿಸಿತು. ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದ ಆರ್ ಸಿ ಬಿ ತಂಡವು ತನ್ನ ಚೊಚ್ಚಲ ಪ್ರಶಸ್ತಿ ಗಳಿಸಿತು. 18 ವರ್ಷಗಳಿಂದ ಒಂದೇ ತಂಡದ ಪರ ಆಡಿದ ವಿರಾಟ್ ಕೊಹ್ಲಿ ಅವರ ಸಂಭ್ರಮ ಮುಗಿಲು ಮುಟ್ಟಿತು.
ತನ್ನ ತಂಡ ಆರ್ ಸಿ ಬಿ ಯು ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾದರು. ತನ್ನ ಹಳೆಯ ಟೀಮ್ ಮೇಟ್ ಎಬಿಡಿ ವಿಲಿಯರ್ಸ್ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಕ್ಷಣಕ್ಕೆ ಸಾಕ್ಷಿಯಾದರು. ಆರ್ ಸಿ ಬಿ ಜರ್ಸಿ ಧರಿಸಿಕೊಂಡು ಕ್ರೀಡಾಂಗಣದೊಳಗೆ ಬಂದ ಎಬಿಡಿ ಜೊತೆ, ಸಿಖ್ ಪೇಟಧಾರಿಯಾಗಿ ಆರ್ ಸಿ ಬಿ ಜರ್ಸಿಯೊಂದಿಗೆ ಬಂದ ಕ್ರಿಸ್ ಗೇಲ್ ಅವರು ವಿರಾಟ್ ಕೊಹ್ಲಿಯವರ ಸಂಭ್ರಮಕ್ಕೆ ಕಿಚ್ಚು ಹಚ್ಚಿದರು.
ಪ್ರಶಸ್ತಿ ಸ್ವೀಕರಿಸುವ ವೇಳೆ ಆರ್ ಸಿ ಬಿ ತಂಡದ ನಾಯಕ ನಾನು ಅಭಿಮಾನಿಗಳಿಗೆ ಒಂದು ಮಾತು ಹೇಳಲು ಬಯಸುತ್ತೇನೆ ಎಂದು, “ಈ ಸಲ ಕಪ್ ನಮ್ದೇ” ಎಂದಾಗ ಮತ್ತೆ ಸಂಭ್ರಮ ಕಳೆಗಟ್ಟಿತು. ಈ ವೇಳೆ ಆರ್ಸಿಬಿ… ಆರ್ಸಿಬಿ… ಎಂದು ಅಭಿಮಾನಿಗಳು ಸಂಭ್ರಮಿಸಿದರು.