×
Ad

ವಿಶ್ವಕಪ್‌ ಗೆಲುವು | ಕೊಹ್ಲಿಯ ಇನ್ಸ್ಟಾಗ್ರಾಮ್ ಪೋಸ್ಟ್‌ಗೆ 1.7 ಕೋಟಿ ಲೈಕ್ಸ್!

Update: 2024-06-30 22:49 IST

Photo Courtesy: X @BCCI

ಮುಂಬೈ: ಭಾರತ ಕ್ರಿಕೆಟ್ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್‌ ಗೆದ್ದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಪೋಸ್ಟ್ಗೆ ದಾಖಲೆಯ ಲೈಕ್ಸ್ ಬಂದಿದೆ.

1.7 ಕೋಟಿಗೂ ಅಧಿಕ ಲೈಕ್ಸ್ ಪಡೆಯುವ ಮೂಲಕ ಕೊಹ್ಲಿಯ ಪೋಸ್ಟ್ ಭಾರತದಲ್ಲಿ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಎನ್ನುವ ಅಗ್ಗಳಿಕೆಗೆ ಅದು ಪಾತ್ರವಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ವಿಶ್ವಕಪ್‌ ಗೆದ್ದ ತಂಡದ ಭಾಗವಾಹಿರುವ ಸದಸ್ಯರೊಂದಿಗೆ ನಾಯಕ ರೋಹಿತ್‌ ಶರ್ಮಾ ಟ್ರೋಫಿ ಎತ್ತಿ ಹಿಡಿದ ಚಿತ್ರವನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ, “ಇದಕ್ಕಿಂತ ಒಳ್ಳೆಯ ದಿನದ ಕನಸು ಕಾಣಲು ಸಾಧ್ಯವಿರಲಿಲ್ಲ. ದೇವರು ದೊಡ್ಡವನು. ನಾನು ಕೃತಜ್ಞತೆಯಿಂದ ತಲೆ ಬಾಗಿಸುತ್ತೇನೆ. ನಾವು ಅಂತಿಮವಾಗಿ ಗೆದ್ದೆವು. ಜೈ ಹಿಂದ್’ ಎಂದು ಪೋಸ್ಟ್‌ ಮಾಡಿದ್ದರು.

ಕೊಹ್ಲಿ ಅವರು ಪೋಸ್ಟ್ ಮಾಡಿದ ಈ ಚಿತ್ರಕ್ಕೆ ಕೇವಲ 15 ಗಂಟೆಯಲ್ಲಿ 6.74 ಲಕ್ಷ ಕಮೆಂಟ್‌ಗಳು ಬಂದಿವೆ. ವಿವಿಧ ಕ್ಷೇತ್ರದ ದಿಗ್ಗಜರು ಶುಭಹಾರೈಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News