×
Ad

ವಾರ್ನರ್ ವಿರುದ್ಧದ ನಾಯಕತ್ವದ ನಿಷೇಧ ಹಿಂಪಡೆದ ಕ್ರಿಕೆಟ್ ಆಸ್ಟ್ರೇಲಿಯ

Update: 2024-10-25 21:59 IST

ಡೇವಿಡ್ ವಾರ್ನರ್ | PC : PTI 

ಮೆಲ್ಬರ್ನ್ : ಕ್ರಿಕೆಟ್ ಆಸ್ಟ್ರೇಲಿಯ(ಸಿಎ)ನಡವಳಿಕೆ ಆಯೋಗದ ಪರಿಶೀಲನೆಯ ನಂತರ ಡೇವಿಡ್ ವಾರ್ನರ್ ಮೇಲಿನ ನಾಯಕತ್ವದ ಆಜೀವ ನಿಷೇಧವನ್ನು ರದ್ದುಗೊಳಿಸಲಾಗಿದೆ.

ವಾರ್ನರ್ ಅವರು ನಿಷೇಧವನ್ನು ತೆಗೆದುಹಾಕಲು ಅಗತ್ಯವಿರುವ ಮಾನದಂಡವನ್ನು ಪೂರೈಸಿದ್ದಾರೆ ಎಂದು ಸ್ವತಂತ್ರ ಮೂವರು ಸದಸ್ಯರ ಪರಿಶೀಲನಾ ಸಮಿತಿಯು ಸರ್ವಾನುಮತದಿಂದ ನಿರ್ಧರಿಸಿದೆ.

2018ರಲ್ಲಿ ವಿಧಿಸಲಾದ ನಿಷೇಧವನ್ನು ನೀತಿ ಸಂಹಿತೆಯ ಆರ್ಟಿಕಲ್ 10ರ ಪ್ರಕಾರ ಮಾರ್ಪಡಿಸಲು ವಾರ್ನರ್ ಅರ್ಜಿ ಸಲ್ಲಿಸಿದ ನಂತರ ವಿಚಾರಣೆ ನಡೆಯಿತು.

ಆಸ್ಟ್ರೇಲಿಯದ ಮಾಜಿ ಆರಂಭಿಕ ಆಟಗಾರ ವಾರ್ನರ್ ಇನ್ನು ಮುಂದೆ ಎಲ್ಲ ಆಸ್ಟ್ರೇಲಿಯದ ಕ್ರಿಕೆಟ್ ಸ್ಪರ್ಧಾವಳಿಗಳಲ್ಲಿ ನಾಯಕತ್ವವನ್ನು ವಹಿಸಲು ಅರ್ಹರಾಗಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News